ಬೆಂಗಳೂರು : ಹೆಚ್ಚಿನ ಗಂಡಸರು ಬೆಡ್ ಅಥವಾ ಸೋಫಾ ಮೇಲೆ ಕುಳಿತು ಹೆಂಡತಿಯ ಬಳಿ ಒಂದ್ಲೋಟ ಟೀ ಮಾಡಿಕೊಡು ಬಾ ಎಂದು ಆರ್ಡರ್ ಮಾಡುತ್ತಾರೆ. ಆದರೆ ಹೀಗೆ ಆರ್ಡರ್ ಮಾಡುವ ಗಂಡಸರ ಸೆಕ್ಸ್ ಜೀವನಕ್ಕಿಂತ ಹೆಂಡತಿಗೆ ಸಹಾಯ ಮಾಡುವ ಗಂಡಸರ ಜೀವನ ಸುಖಕರವಾಗಿರುತ್ತದೆಯಂತೆ.
ಈ ರೀತಿಯಾಗಿ ಹೇಳುತ್ತಿರುವುದು ಬೇರೆ ಯಾರು ಅಲ್ಲ. ಕೆನಡಾದ ಅಲ್ಬರ್ಟಾ ವಿಶ್ವವಿದ್ಯಾಲಯದ ಸಂಶೋಧಕರು. ಅವರು ಹೊಸ ಸಂಶೋಧನೆಯನ್ನು ಮಾಡಿದ್ದು, ಅದರ ಪ್ರಕಾರ ಹೆಂಡತಿಗೆ ಸಹಾಯ ಮಾಡುವ ಅದರಲ್ಲೂ ಅಡುಗೆ ಮನೆಯಲ್ಲಿ ಸಹಾಯ ಮಾಡುವ ಗಂಡಸರ ಸೆಕ್ಸ್ ಲೈಫ್ ಚೆನ್ನಾಗಿರುತ್ತದೆ.
ಅದರಂತೆ ಅಡುಗೆ ಮನೆಯಲ್ಲಿ ಲೋಕಾಭಿರಾಮವಾಗಿ ಹರಟುತ್ತಾ ಹೆಂಡತಿಗೆ ಸಹಾಯ ಮಾಡುವ ಗಂಡಸರು, ಮಿಲನ ಮಹೋತ್ಸವದಲ್ಲೂ ಹೆಂಡತಿಗೆ ಪರಮ ಸುಖ ಕೋಡೊದ್ರಲ್ಲಿ ನಿಸ್ಸೀಮರು ಅಂತಾ ಸಂಶೋಧನೆ ತಿಳಿಸಿದೆ. ಅಲ್ಲದೇ ಹೆಂಡತಿ ಕೂಡ ಈ ಗಂಡಂದಿರ ಯೋಗಕ್ಷೇಮ ನೋಡಿಕೊಳ್ಳುವ ವಿಚಾರದಲ್ಲಿ ಮೀನಾಮೇಷ ಎಣಿಸಲ್ವಂತೆ. ಗಂಡನ ಎಲ್ಲಾ ಆಸೆಗಳನ್ನು ಪೂರೈಸಿ, ಅವರು ಸಂತೋಷವಾಗಿ ಇರುವಂತೆ ಮಾಡುತ್ತಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ