ಪ್ರತಿದಿನ ಚಹಾ ಕುಡಿಯುವ ಅಭ್ಯಾಸ ನಿಮಗಿದೆಯಯಾ? ಹಾಗಾದರೆ ಚಹಾದಲ್ಲಿ ಸಣ್ಣ ಶುಂಠಿ ತುಂಡನ್ನು ಹಾಕಿ ಕುಡಿಯಿರಿ. ಇದು ನಿಮ್ಮ ಆರೋಗ್ಯವನ್ನು ಹೆಚ್ಚಿಸುತ್ತದೆ. ಶುಂಠಿ ಮ್ಯೆಗ್ನೀಶಿಯಂ,ಶೋಗವ್ಲ್, ಪೊಟಾಶಿಯಂ, ಜಿಂಜೆರೊಲ್, ವಿಟಮಿನ್ ಬಿ6 ಮತ್ತು ಸಿ ಹಾಗು ಝಿಂಜೆರೋನ್, ಫರ್ನೆಸೀನ್ ಮತ್ತು ಬೀಟಾ-ಫೆಲ್ಲಾಡ್ರೀನ್, ಸಿನಿಯೊಲ್ ಹಾಗು ಸಿಟ್ರಾಲ್‍ನಂತಹ ಉಪಯುಕ್ತವಾದ ಎಣ್ಣೆಗಳನ್ನು ಹೊಂದಿದೆ.
- ಹಾನಿಕಾರಕ ಪದಾರ್ಥಗಳಿಂದ ದೇಹವನ್ನು ಶುದ್ಧೀಕರಿಸುತ್ತದೆ ಮತ್ತು ಆಂಟಿಹೆಲ್ಮಿಥಿಕ್ ಪರಿಣಾಮವನ್ನು ತೋರಿಸುತ್ತದೆ
- ಶುಂಠಿ ಚಹಾ ಒತ್ತಡ ನಿವಾರಿಸಿ, ಮೂಡ್ ಚೆನ್ನಾಗಿರಿಸುತ್ತದಲ್ಲದೆ, ಫ್ರೆಶ್ ಆಗಿರುವಂತೆ ನೋಡಿಕೊಳ್ಳುತ್ತದೆ.
- ಯಕೃತ್ತು ಮತ್ತು ಮೂತ್ರದ ವ್ಯವಸ್ಥೆಯನ್ನು ಶುದ್ಧೀಕರಿಸುತ್ತದೆ.
- ಅಸ್ತಮಾ ರೋಗಿಗಳಿಗೂ ಇದು ಉತ್ತಮ. ಶ್ವಾಸಕೋಶ ಸಡಿಲಗೊಳಿಸಿ, ಉಸಿರಾಟ ಕ್ರಿಯೆಯನ್ನು ಸುಗಮಗೊಳಿಸುತ್ತದೆ.
- ಶುಂಠಿ ಸ್ನಾಯು ಮತ್ತು ಜಂಟಿ ನೋವನ್ನು ನಿವಾರಿಸಬಲ್ಲ ಶಕ್ತಿ ಹೊಂದಿದ್ದು ಉರಿಯೂತದ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುತ್ತದೆ.
- ಇದು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ.
- ಇದು ಕೆಮ್ಮು, ಶೀತ ಮತ್ತು ಗಂಟಲುಬೇನೆಗೆ ಉತ್ತಮ ಪರಿಹಾರ ನೀಡುತ್ತದೆ.
- ಜೀರ್ಣಾಂಗವ್ಯೂಹಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಗೆ ಉತ್ತಮ ಪರಿಹಾರ ನೀಡುತ್ತದೆ.
- ಶುಂಠಿಯನ್ನು ಜಗಿದು ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ.
- ಪ್ರಯಾಣ ಮಾಡುವ ಮೊದಲು ಲೋಟ ಶುಂಠಿ ಚಹಾ ಕುಡಿದರೆ ವಾಕರಿಕೆ ಮತ್ತು ವಾಂತಿ ತಡೆಗಟ್ಟಬಹುದು.
- ಅಸ್ತಮಾ ರೋಗದಿಂದ ಬಳಲುತ್ತಿರುವವರು ಶುಂಠಿ ಚಹಾ ಕುಡಿಯುವುದರಿಂದ ಶ್ವಾಸಕೋಶ ಸಡಿಲಗೊಳಿಸಿ, ಉಸಿರಾಟ ಕ್ರಿಯೆಯನ್ನು ಸುಗಮಗೊಳಿಸುತ್ತದೆ.
- ಆಸ್ಟ್ರೀಯೋ ಅಥ್ರೈಟಿಸ್ನ್ನು ಕಡಿಮೆ ಮಾಡಲು ಶುಂಠಿಯು ಹೆಚ್ಚು ಸಹಕಾರಿ.
- ಮಹಿಳೆಯರು ಮುಟ್ಟಾದ ಸಂದರ್ಭದಲ್ಲಿ ಶುಂಠಿ ಚಹಾವನ್ನು ಕುಡಿಯುವುದರಿಂದ ನೋವನ್ನು ಕಡಿಮೆ ಮಾಡಬಹುದು.
- ಶುಂಠಿ ಚಹಾ ಸೇವಿಸುವುದರಿಂದ ಮಲ ವಿಸರ್ಜನೆ ಸರಿಯಾಗಿ ಆಗುತ್ತದೆ.
ಶುಂಠಿ ಚಹಾ ಮಾಡುವುದು ಹೇಗೆ?
ಬೇಕಾಗುವ ಸಾಮಗ್ರಿಗಳು
1 ಚಮಚ ಸಕ್ಕರೆ
1 ಕಪ್ ನೀರು
1 ಕಪ್ ಹಾಲು
ಸಣ್ಣ ತುಂಡರಿಸಿದ ತಾಜಾ ಶುಂಠಿ
1/2 ಚಮಚ ಚಹಾಪುಡಿ
ಮಾಡುವ ವಿಧಾನ
ಎಲ್ಲ ಪದಾರ್ಥಗಳನ್ನು ಪಾತ್ರೆಯಾಂದರಲ್ಲಿ ಹಾಕಿ ಚೆನ್ನಾಗಿ ಕುದಿಸಿ, ಸವಿಯಿರಿ.