ಕಾಜಲ್ ಅಥವಾ ಕಾಡಿಗೆಯನ್ನು ಸಾಮಾನ್ಯವಾಗಿ ಪ್ರಪಂಚದಾದ್ಯಂತ ಬಳಸಲಾಗುತ್ತದೆ. ಕೇವಲ ಕಣ್ಣುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡುವುದಲ್ಲದೆ, ಅವುಗಳಿಂದ ಅನೇಕ ಲಾಭಗಳಿವೆ, ಉದಾಹರಣೆಗೆ ಕಣ್ಣನ್ನು ತಣ್ಣಗಾಗಿಸುತ್ತದೆ ಮತ್ತು ಕಣ್ಣುಗಳಿಂದ ಕೊಳಕು ಅಥವಾ ಕಲ್ಮಶಗಳನ್ನು ತೆಗೆದುಹಾಕುತ್ತದೆ.
ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಬೆಲೆಯ ರಾಸಾಯನಿಕ ಇರುವ ಕಾಜಲ್ ಮತ್ತು ಲಿಪ್‌ಬಾಮ್ ಬಳಸುವ ಬದಲು ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳನ್ನು ಬಳಸಿ ಕಾಜಲ್ ಮತ್ತು ಲಿಪ್‌ಬಾಮ್ ತಯಾರಿಸುವುದು ಹೇಗೆ ಎಂದು ನೋಡೋಣ
1. ಕಾಜಲ್ / ಕಾಡಿಗೆ :
ಬೇಕಾಗುವ ಸಾಮಗ್ರಿ -
6 ಬಾದಾಮಿ
ತಾಮ್ರದ ಚಮಚ
2-3 ಹನಿ ಬಾದಾಮಿ ಎಣ್ಣೆ
ತಯಾರಿಸುವ ವಿಧಾನ -
4 ಬಾದಾಮಿಯನ್ನು ಒಂದೊಂದಾಗಿ ದೀಪದ ಮೇಲೆ ಹಿಡಿದು ಸುಡುವಂತೆ ಮಾಡಿ, ಬಾದಾಮಿ ಸುಡುತ್ತಿರುವಾಗ ಅದರ ಮೇಲೆ ತಾಮ್ರದ ಚಮಚವನ್ನು ಹಿಡಿಯಿರಿ. 4 ಬಾದಾಮಿಯನ್ನು ಸುಟ್ಟಿದ ನಂತರ ತಾಮ್ರದ ಚಮಚದಲ್ಲಿ ಆಗಿರುವ ಕಪ್ಪನ್ನು ತೆಗೆದು ಒಂದು ಸಣ್ಣ ದಬ್ಬದಲ್ಲಿ ಹಾಕಿ, 2-3 ಹನಿ ಬಾದಾಮಿ ಎಣ್ಣೆಯನ್ನು ಮಿಶ್ರಣ ಮಾಡಿದರೆ ಕಾಜಲ್ ರೆಡಿ. ನೀವು ಇದನ್ನು 4-5 ತಿಂಗಳವರೆಗೆ ಬಳಸಬಹುದು.
* ರೋಸ್ ಲಿಪ್‌ಬಾಮ್
ಬೇಕಾಗುವ ಸಾಮಗ್ರಿ -
1 ಚಮಚ ತುರಿದ ಜೇನುಮೇಣ
1 ಚಮಚ ಶಿಯಾ ಬಟರ್
1/2 ಚಮಚ ತೆಂಗಿನ ಎಣ್ಣೆ
1 ವಿಟಮಿನ್ ಇ ಕ್ಯಾಪ್ಸುಲ್
4-5 ಹನಿ ರೋಸ್ ಆಯಿಲ್
ತಯಾರಿಸುವ ವಿಧಾನ -
ಒಂದು ಬಿಸಿ ನೀರಿನ ಬಟ್ಟಲಲ್ಲಿ ಸಣ್ಣ ಬಟ್ಟಲನ್ನು ಇಟ್ಟು ಅದರಲ್ಲಿ ಮೇಲಿರುವ ಎಲ್ಲಾ ಪದಾರ್ಥಗಳನ್ನು ಹಾಕಿ ಕರಗಿಸಿಕೊಳ್ಳಿ. ಅದು ಕರಗಿದ ನಂತರ ಒಂದು ಸಣ್ಣ ದಬ್ಬದಲ್ಲಿ ಹಾಕಿ ತಣ್ಣಗಾಗಿಸಿದರೆ ರೋಸ್ ಲಿಪ್‌ಬಾಮ್ ರೆಡಿ.
* ಚಾಕೊಲೇಟ್ ಲಿಪ್‌ಬಾಮ್
ಬೇಕಾಗುವ ಸಾಮಗ್ರಿ -
ಡೈರಿಮಿಲ್ಕ್ ಚಾಕೊಲೇಟ್ - ಚಿಕ್ಕದು 1
1 ಚಮಚ ತುರಿದ ಜೇನುಮೇಣ
1 ಚಮಚ ಕೋಕೋ ಬಟರ್
ತಯಾರಿಸುವ ವಿಧಾನ -
ಒಂದು ಬಿಸಿ ನೀರಿನ ಬಟ್ಟಲಲ್ಲಿ ಸಣ್ಣ ಬಟ್ಟಲನ್ನು ಇಟ್ಟು ಅದರಲ್ಲಿ ಮೇಲಿರುವ ಎಲ್ಲಾ ಪದಾರ್ಥಗಳನ್ನು ಹಾಕಿ ಕರಗಿಸಿಕೊಳ್ಳಿ. ಅದು ಕರಗಿದ ನಂತರ ಒಂದು ಸಣ್ಣ ದಬ್ಬದಲ್ಲಿ ಹಾಕಿ ತಣ್ಣಗಾಗಿಸಿದರೆ ಚಾಕೊಲೇಟ್ ಲಿಪ್‌ಬಾಮ್ ರೆಡಿ.
* ಲಾಲಿಪಾಪ್ ಲಿಪ್‌ಬಾಮ್
ಬೇಕಾಗುವ ಸಾಮಗ್ರಿ -
ಯಾವುದೇ ಫ್ಲೇವರ್‌ನ ಲಾಲಿಪಾಪ್ 1
1 ಚಮಚ ವ್ಯಾಸಲಿನ್
ತಯಾರಿಸುವ ವಿಧಾನ -
ಲಾಲಿಪಾಪ್ ಅನ್ನು ಜಜ್ಜಿ ಪುಡಿಮಾಡಿ, ಅದಕ್ಕೆ ವ್ಯಾಸಲಿನ್ ಸೇರಿಸಿ ಕರಗುವ ತನಕ ಮೈಕ್ರೋವೇವ್‌ನಲ್ಲಿರಿಸಿ ಅಥವಾ ಒಂದು ಬಿಸಿ ನೀರಿನ ಬಟ್ಟಲಲ್ಲಿ ಸಣ್ಣ ಬಟ್ಟಲನ್ನು ಇಟ್ಟು ಅದರಲ್ಲಿ ಮೇಲಿರುವ ಪದಾರ್ಥಗಳನ್ನು ಹಾಕಿ ಕರಗಿಸಿಕೊಳ್ಳಿ. ನಂತರ ಒಂದು ಸಣ್ಣ ದಬ್ಬದಲ್ಲಿ ಹಾಕಿ ತಣ್ಣಗಾಗಿಸಿದರೆ ಲಾಲಿಪಾಪ್ ಲಿಪ್‌ಬಾಮ್ ರೆಡಿ.