ಬೆಂಗಳೂರು : ಕೆಲವರಿಗೆ ಪದೇ ಪದೇ ಆರೋಗ್ಯ ಕೆಡುತ್ತಿರುತ್ತದೆ. ಅಂತವರು ಈ ನೀರಿನಿಂದ ಸ್ನಾನ ಮಾಡಿದರೆ ನಿಮಗೆ ಅನಾರೋಗ್ಯದ ಸಮಸ್ಯೆ ಕಾಡುವುದಿಲ್ಲ.
ಹೌದು. ತಣ್ಣಿರಿನಲ್ಲಿ ಸ್ನಾನ ಮಾಡಿದರೆ ನೆಗಡಿ, ಕಫ, ಜ್ವರ ಬರುತ್ತದೆ ಎಂದು ಹೇಳುತ್ತಾರೆ. ಆದರೆ ತಣ್ಣೀರಿನಲ್ಲಿ ಸ್ನಾನ ಮಾಡಿದರೆ ಅದರಿಂದ ಆರೋಗ್ಯ ಹೆಚ್ಚಾಗುತ್ತದೆ. ತಣ್ಣೀರು ಚರ್ಮಕ್ಕೆ ಬಿದ್ದಾಗ ರಕ್ತನಾಳಗಳು ಕುಗ್ಗುತ್ತದೆ ಬಳಿಕ ಹಿಗ್ಗುತ್ತದೆ. ಇದರಿಂದ ರಕ್ತ ಸಂಚಾರ ಸರಾಗವಾಗಿ ದೇಹವು ಆರೋಗ್ಯವಾಗಿರುತ್ತದೆ.
ಆದರೆ ಬಿಸಿ ನೀರಿನಿಂದ ಸ್ನಾನ ಮಾಡಿದರೆ ಚರ್ಮ, ಕೂದಲಿಗೆ ಒಳ್ಳೆಯದಲ್ಲ. ಆದಕಾರಣ ತಣ್ಣೀರಿನಲ್ಲಿ ಅಥವಾ ಉಗುರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದರೆ ಉತ್ತಮ.