Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆರೋಗ್ಯಕ್ಕೆ ಹಿತಕರವಾದ ಗೋಧಿ ಸಂಡಿಗೆ

ಆರೋಗ್ಯಕ್ಕೆ ಹಿತಕರವಾದ ಗೋಧಿ ಸಂಡಿಗೆ
ಬೆಂಗಳೂರು , ಗುರುವಾರ, 27 ಆಗಸ್ಟ್ 2020 (08:11 IST)
ಬೆಂಗಳೂರು : ಸಂಡಿಗೆ ಊಟ ಮಾಡುವಾಗ ತಿನ್ನಲು ಹಿತಕರವೆನಿಸುತ್ತದೆ. ಹಲವು ಬಗೆಯ ಸಂಡಿಗೆಗಳನ್ನು ತಯಾರಿಸಬಹುದು. ಅದರಲ್ಲಿ ಗೋಧಿ ಸಂಡಿಗೆ ಮಾಡುವುದು ಹೇಗೆಂದು ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು :  ½ ಕಪ್‍ ಗೋಧಿ ಹಿಟ್ಟು, ಉಪ್ಪು, 6 ಹಸಿಮೆಣಸಿನಕಾಯಿ, ½ ಚಮಚ ಜೀರಿಗೆ, 2 ಚಿಟಿಕೆ ಇಂಗು.
ಮಾಡುವ ವಿಧಾನ : ಗೋಧಿ ಹಿಟ್ಟಿಗೆ 1 ಕಪ್ ನೀರನ್ನು ಬೆರೆಸಿ 6 ಗಂಟೆಗಳ ಕಾಲ ಹಾಗೇ ಇಡಿ. ಬಳಿಕ ಇದಕ್ಕೆ ಹಸಿಮೆಣಸಿನಕಾಯಿಯ ಪೇಸ್ಟ್ ನ್ನು ಸೇರಿಸಿ ಮಿಕ್ಸ್ ಮಾಡಿ. ಬಳಿಕ ನೀರು, ಉಪ್ಪು, ಜೀರಿಗೆ, ಇಂಗನ್ನು ಸೇರಿಸಿ ಕುದಿಸಿ. ಅದು ಕುದಿಯುತ್ತಿದ್ದಂತೆ ಅದಕ್ಕೆ ಗೋಧಿ ಹಿಟ್ಟಿನ ಮಿಶ್ರಣವನ್ನು ಸೇರಿಸಿ 7 ನಿಮಿಷ ಕುದಿಸಿ. ಬಳಿಕ ಅದರಿಂದ ಒಂದೊಂದು ಚಮಚ ಹಿಟ್ಟನ್ನು ದೊಡ್ಡ ತಟ್ಟೆಯಲ್ಲಿ ಇಟ್ಟು ಬಿಸಿಲಿನಲ್ಲಿ 2 ದಿನ ಒಣಗಿಸಿ ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಕೂದಲು ಸ್ಟ್ರೈಟ್ ಆಗಲು ಇದನ್ನು ಹಚ್ಚಿ