Publish Date: Mon, 13 Jul 2020 (07:59 IST)
Updated Date: Mon, 13 Jul 2020 (08:29 IST)
ಬೆಂಗಳೂರು : ಉದ್ದಿನಬೇಳೆಯಲ್ಲಿ ದೋಸೆ ಇಡ್ಲಿ ಮಾಡುವುದು ಮಾತ್ರವಲ್ಲ ಸಿಹಿಯಾದ ಉಂಡೆಯನ್ನು ಕೂಡ ತಯಾರಿಸಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.
ಬೇಕಾಗುವ ಸಾಮಾಗ್ರಿಗಳು : ಉದ್ದಿನ ಬೇಳೆ 1 ಕಪ್, ಸಕ್ಕರೆ ¾ ಕಪ್, ತುಪ್ಪ ¾ ಕಪ್, ಏಲಕ್ಕಿ 3-4, ದ್ರಾಕ್ಷಿ ಸ್ವಲ್ಪ, ಗೋಡಂಬಿ ಸ್ವಲ್ಪ.
ಮಾಡುವ ವಿಧಾನ : ಉದ್ದಿನ ಬೇಳೆ ಹುರಿದು ಹಿಟ್ಟು ಮಾಡಿಕೊಳ್ಳಿ. ಹಾಗೇ ಒಂದು ಪಾತ್ರೆಯಲ್ಲಿ ತುಪ್ಪ ಹಾಕಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿದಿಟ್ಟುಕೊಳ್ಳಿ. ಅದಕ್ಕೆ ತುಪ್ಪ ಹಾಕಿ ಉದ್ದಿನ ಹಿಟ್ಟನ್ನು ಹುರಿದುಕೊಳ್ಳಿ. ಅದಕ್ಕೆ ಪುಡಿ ಮಾಡಿದ ಸಕ್ಕರೆ, ಹುರಿದ ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ, ಸ್ವಲ್ಪ ತುಪ್ಪ ಸೇರಿಸಿ ಮಿಕ್ಸ್ ಮಾಡಿ. ಅದನ್ನು ಉಂಡೆ ಮಾಡಿದರೆ ಉದ್ದಿನ ಸಿಹಿ ಉಂಡೆ ರೆಡಿ.
pavithra
Publish Date: Mon, 13 Jul 2020 (07:59 IST)
Updated Date: Mon, 13 Jul 2020 (08:29 IST)