ಬೆಂಗಳೂರು: ಹೊಟ್ಟೆ ದಪ್ಪಗಾಗಿ ಅಸಹ್ಯವಾಗಿ ಕಾಣುತ್ತಿದೆಯೇ? ಹಾಗಿದ್ದರೆ ನಿಮ್ಮ ಆಹಾರದಲ್ಲಿ ಕೆಲವೊಂದು ಬದಲಾವಣೆ ತಂದು ಅದನ್ನು ಸರಿಪಡಿಸಿಕೊಳ್ಳಿ.
ಕಡಿಮೆ ಊಟ
ಕಡಿಮೆ ಕೊಬ್ಬು ಇರುವ ಆಹಾರವನ್ನು ಸೇವಿಸಬೇಡಿ. ಹೆಚ್ಚು ಪ್ರೊಟೀನ್ ಅಂಶವಿರುವ, ಫೈಬರ್ ಅಂಶವಿರುವ ಆಹಾರವನ್ನು ನಿಗದಿತ ಬ್ರೇಕ್ ಕೊಟ್ಟು ಸೇವಿಸುತ್ತಿರಿ.
ಹೆಚ್ಚು ನೀರು
ಹೆಚ್ಚು ನೀರು ಸೇವಿಸುವುದರಿಂದ ದೇಹದಲ್ಲಿರುವ ಬೇಡದ ಕೊಬ್ಬಿನಂಶ ಕರಗುತ್ತದೆ. ಇದರಿಂದಾಗಿ ಹೊಟ್ಟೆ ಬೊಜ್ಜು ಕರಗುತ್ತದೆ.
ದೈಹಿಕ ಕಸರತ್ತು
ಏನೇ ತಿಂದರೂ ದೇಹಕ್ಕೆ ಸಾಕಷ್ಟು ವ್ಯಾಯಾಮ ಸಿಗದೇ ಇದ್ದರೆ ಬೊಜ್ಜು ಬೆಳೆಯುವುದು ಖಂಡಿತಾ. ಹಾಗಾಗಿ ಹೊಟ್ಟೆಗೆ ಹೆಚ್ಚು ಕೆಲಸ ಸಿಗುವಂತಹ ದೈಹಿಕ ವ್ಯಾಯಾಮ ಮಾಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.