Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತರಕಾರಿಗಳಲ್ಲಿರುವ ಕೀಟನಾಶಕಗಳನ್ನು ತೆಗೆಯುವ ಸರಳ ವಿಧಾನಗಳು..!

ತರಕಾರಿಗಳಲ್ಲಿರುವ ಕೀಟನಾಶಕಗಳನ್ನು ತೆಗೆಯುವ ಸರಳ ವಿಧಾನಗಳು..!
ಮೈಸೂರು , ಗುರುವಾರ, 7 ಅಕ್ಟೋಬರ್ 2021 (07:43 IST)
ನಾವು ಪ್ರತಿನಿತ್ಯ ತರಕಾರಿ, ಹಣ್ಣುಗಳನ್ನು ತಿನ್ನಬೇಕು. ಆಗ ಆರೋಗ್ಯ ಉತ್ತಮವಾಗಿರುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸರಿ. ಏಕೆಂದರೆ ನಾವು ಬಳಸುವ ಹಣ್ಣು-ತರಕಾರಿಗಳ ಮೇಲೆ ರಾಸಾಯನಿಕ ಅಂಶಗಳು ತಾಂಡವವಾಡುತ್ತಿರುತ್ತದೆ.

ತಾಜಾವಾಗಿ ಇರಲು, ಬಹಳ ದಿನಗಳ ಕಾಲ ಉಳಿಯಲು ಹೀಗೆ ಪ್ರತಿ ಕಾರಣಗಳನ್ನು ಹೇಳಿ ಕೀಟನಾಶಕಗಳ  ಬಳಕೆ ಎಗ್ಗಿಲ್ಲದೇ ಸಾಗುತ್ತಿದೆ. ತರಕಾರಿ, ಹಣ್ಣುಗಳ ಮೂಲಕ ರಾಸಾಯನಿಕಗಳು ದೇಹದೊಳಗೆ ಸೇರಿ ಯಾವ ಯಾವ ರೋಗಗಳು ಶುರುವಾಗುತ್ತದೋ ಎಂಬ ಭಯದಲ್ಲೇ ತಿನ್ನಬೇಕಾಗಿದೆ.
ಇತ್ತೀಚೆಗೆ ಅನೇಕ ಗುಂಪುಗಳು ಮತ್ತು ಎನ್ಜಿಒಗಳು, ಹಣ್ಣುಗಳು ಮತ್ತು ತರಕಾರಿಗಳ ಮೇಲೆ ಪರೀಕ್ಷೆ ನಡೆಸಿದವು. ಅವುಗಳಲ್ಲಿ ಹೆಚ್ಚಿನ ಪ್ರಮಾಣದ ಕೀಟನಾಶಕ ಬಳಕೆಯಾಗಿರುವುದು ಕಂಡು ಬಂದಿದೆ. ವಿಜ್ಞಾನ ಮತ್ತು ಪರಿಸರ ಕೇಂದ್ರದ (ಸಿಎಸ್ಐ) ಪ್ರಕಾರ, "ಹೆಚ್ಚು ಕಾಲ ಉಳಿಯುವ ಕೀಟನಾಶಕಗಳು ಕ್ಯಾನ್ಸರ್, ನರ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಗಳಿಗೆ ಹಾನಿ, ಜನನ ದೋಷಗಳು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ತೀವ್ರ ಅಡಚಣೆಗೆ ಕಾರಣವಾಗುವಷ್ಟು ವಿಷಕಾರಿಯಾಗಬಹುದಂತೆ.
ಹಾಗಾದರೆ ಕೆಳಗೆ ತಿಳಿಸಿದ ವಿಧಾನಗಳ ಮೂಲಕ ತರಕಾರಿ ಮತ್ತು ಹಣ್ಣುಗಳನ್ನು ಕೀಟನಾಶಕ ಮುಕ್ತಗೊಳಿಸಲು ಯೋಚಿಸಿ.
webdunia

ಆಹಾರವನ್ನು ಸರಿಯಾಗಿ ತೊಳೆಯಿರಿ
ನಿಮ್ಮ ಎಲ್ಲ ಹಣ್ಣುಗಳು ಮತ್ತು ತರಕಾರಿಗಳನ್ನು ತೊಳೆದು ತಿನ್ನುವ, ಬಳಸುವ ಅಭ್ಯಾಸ ರೂಢಿಸಿಕೊಳ್ಳಿ. ಸಿಎಸ್ಇ ಪ್ರಕಾರ, ಉಪ್ಪುನೀರಿನಿಂದ ತೊಳೆಯುವುದರಿಂದ ಸಾಮಾನ್ಯವಾಗಿ ತರಕಾರಿಗಳು ಮತ್ತು ಹಣ್ಣುಗಳ ಮೇಲ್ಮೈಯಲ್ಲಿ ಕಾಣಿಸಿಕೊಳ್ಳುವ ಕೀಟನಾಶಕ ಅವಶೇಷಗಳನ್ನು ತೆಗೆದುಹಾಕಬಹುದು. ಸುಮಾರು 75 ರಿಂದ 80 ಪ್ರತಿಶತ ಕೀಟನಾಶಕ ಅವಶೇಷಗಳನ್ನು ತಣ್ಣೀರಿನಿಂದ ತೊಳೆಯಲಾಗುತ್ತದೆ. ನಿರ್ದಿಷ್ಟವಾಗಿ ದ್ರಾಕ್ಷಿ, ಸೇಬು, ಪೇರಲ, ಪ್ಲಮ್, ಮಾವಿನಹಣ್ಣು, ಪೀಚ್ ಮತ್ತು ಪೇರಳೆ ಮತ್ತು ಟೊಮ್ಯಾಟೋ, ಬೇಳೆ ಮತ್ತು ಓಕ್ರಾದಂತಹ ತರಕಾರಿ, ಹಣ್ಣುಗಳ ಬಿರುಕುಗಳಲ್ಲಿ ಹೆಚ್ಚು ಕೀಟನಾಶಕ ಅಂಶಗಳು ನಮಗೆ ಕಾಣಸಿಗುತ್ತದೆ.
ವಿನೆಗರ್ ಬಳಸಿ
webdunia
Photo Courtesy: Google

10 ಪ್ರತಿಶತ ಬಿಳಿ ವಿನೆಗರ್ ಅನ್ನು 90 ಪ್ರತಿಶತದಷ್ಟು ನೀರಿನೊಂದಿಗೆ ಮಿಶ್ರಣ ಮಾಡಿ ಮತ್ತು ತದನಂತರ ನೀವು ತಂದಿರುವ ತರಕಾರಿಗಳು ಮತ್ತು ಹಣ್ಣುಗಳನ್ನು ಅದರಲ್ಲಿ ನೆನೆಸಿ. ಅವುಗಳು ಸಂಪೂರ್ಣವಾಗಿ ಆ ನೀರಿನಲ್ಲಿ ನೆನೆಯುವಂತೆ ನೋಡಿಕೊಳ್ಳಿ, ಬಳಿಕ ಚೆನ್ನಾಗಿ ತೊಳೆಯಿರಿ. ತುಂಬಾ ಮಾಗಿದ ಹಣ್ಣುಗಳನ್ನು ತೊಳೆಯುವಾಗ ಜಾಗರೂಕರಾಗಿರಿ ಮತ್ತು ತೆಳುವಾದ ಸಿಪ್ಪೆ ಹೊಂದಿರುವ ಹಣ್ಣುಗಳು ತೊಳೆಯುವಾಗ ಹಣ್ಣಿನ ಮೇಲೈಯನ್ನು ಹಾನಿಗೊಳಿಸಬಹುದು.
ಬೆಳ್ಳಗೆ ಮಾಡುವುದು ಮತ್ತು ಸಿಪ್ಪೆ ಸುಲಿಯುವುದು
 ಸ್ವಲ್ಪ ಸಮಯದವರೆಗೆ ನಿಮ್ಮ ತರಕಾರಿಗಳನ್ನು ಬೆಚ್ಚಗಿನ ನೀರಿನಲ್ಲಿಡಿ ಮತ್ತು ಇದು ಕೀಟನಾಶಕಗಳನ್ನು ಸ್ವಲ್ಪ ಮಟ್ಟಿಗಾದರೂ ತೆಗೆದುಹಾಕುತ್ತದೆ. ಸಿಪ್ಪೆ ಸುಲಿಯುವಿಕೆಯು ಸಹ ಕೀಟನಾಶಕಗಳನ್ನು ತೆಗೆದುಹಾಕಲು ಮತ್ತೊಂದು ಪರಿಣಾಮಕಾರಿ ಮಾರ್ಗವಾಗಿದೆ ಮತ್ತು ವಿಶೇಷವಾಗಿ ಹಣ್ಣಿನ ಬಿರುಕುಗಳಲ್ಲಿ ಕೆಲವು ಕೀಟನಾಶಕಗಳನ್ನು ತೆಗೆಯಲು ಶಿಫಾರಸು ಮಾಡಲಾಗುತ್ತದೆ. ಅಲ್ಲದೆ, ಕೋಳಿ ಅಥವಾ ಮಾಂಸದ ಅಡುಗೆ ಮಾಡುವಾಗ, ಹೆಚ್ಚುವರಿ ಕೊಬ್ಬು ಮತ್ತು ಚರ್ಮ ಕತ್ತರಿಸಿ. ಏಕೆಂದರೆ ಅದು ಅನಗತ್ಯ ಕೀಟನಾಶಕ ಶೇಷವನ್ನು ಹೀರಿಕೊಳ್ಳುವ ಸಾಧ್ಯತೆ ಇರುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಗತ್ಯಕ್ಕಿಂತ ಹೆಚ್ಚು ನೀರು ಸೇವಿಸುವುದರಿಂದ ಏನಾಗುತ್ತದೆ?