ಬೆಂಗಳೂರು: ಡೆಲಿವರಿ ಆದ ಮೇಲೆ ಗರ್ಭನಿರೋಧಕ ಬಳಸಬೇಕೇ? ಯಾವಾಗಿನಿಂದ ಬಳಸಬೇಕು ಎನ್ನುವ ಅನುಮಾನ ಅನೇಕ ಪತಿ-ಪತ್ನಿಯರಿಗೆ ಬರುತ್ತದೆ.
ನಾರ್ಮಲ್ ಡೆಲಿವರಿ ಆಗಿ ಯಾವುದೇ ಸಮಸ್ಯೆ ಇಲ್ಲದೇ ಹೋದರೆ ಎರಡು ತಿಂಗಳ ಬಳಿಕ ಸೇರುವುದಕ್ಕೆ ಯಾವುದೇ ಸಮಸ್ಯೆಯಿಲ್ಲ. ಆದರೆ ಡೆಲಿವರಿ ಆದ ಮೇಲೆ ಮುಟ್ಟು ಬರುವುದು ಕೆಲವು ಸಮಯ ಹಿಡಿಯಬಹುದು. ಆದರೆ ಈ ಸಂದರ್ಭದಲ್ಲಿ ಗರ್ಭನಿರೋಧಕ ಬಳಸದೇ ಮಿಲನ ಕ್ರಿಯೆ ನಡೆಸುವುದರಿಂದ ಮತ್ತೆ ಗರ್ಭಿಯಾಗಲ್ಲ ಎಂಬ ತಪ್ಪು ಕಲ್ಪನೆ ಬೇಡ. ಕೆಲವೊಂದು ಪ್ರಕರಣಗಳಲ್ಲಿ ಮುಟ್ಟು ಬರದೇ ಇದ್ದರೂ ಗರ್ಭಿಣಿಯಾಗುವ ಸಾಧ್ಯತೆಯಿರುತ್ತದೆ. ಹೀಗಾಗಿ ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಗರ್ಭನಿರೋಧಕ ಬಳಸುವುದು ಉತ್ತಮ.