ಬೆಂಗಳೂರು: ಇಂದಿನ ಬ್ಯುಸಿ ಲೈಫ್ ನಲ್ಲಿ ಬ್ರೆಡ್ ಎಲ್ಲರಿಗೂ ಸುಲಭವಾಗಿ ಸಿಗುವ ಆಹಾರ. ಬೆಳಗ್ಗೆ ಬೇಗ ಎದ್ದು ಅಡುಗೆ ಮಾಡುವ ಬದಲು ಸುಲಭವಾಗಿ ಅಂಗಡಿಯಿಂದ ಬ್ರೆಡ್ ತಂದು, ಜಾಮ್, ಬೆಣ್ಣೆ ಸವರಿ ತಿಂದರೆ ಬ್ರೇಕ್ ಫಾಸ್ಟ್ ಮುಗಿಯಿತು ಎನ್ನುವವರು ಈ ಸುದ್ದಿ ಓದಲೇಬೇಕು.
ನಾವು ತಿನ್ನುವ ಬ್ರೆಡ್ ನಮ್ಮ ದೇಹಕ್ಕೆ ಮಾರಕವಾಗಬಲ್ಲದು. ಯಾವ ರೀತಿ ಇದು ನಮ್ಮ ದೇಹಕ್ಕೆ ಮಾರಕ ಎನ್ನುವುದನ್ನು ನೋಡೋಣ.
ಹಾನಿಕಾರಕ ಕೆಮಿಕಲ್ಸ್
ಬ್ರೆಡ್ ನಲ್ಲಿ ಅದರಲ್ಲೂ ವಿಶೇಷವಾಗಿ ನಮ್ಮ ದೇಶದಲ್ಲಿ ಬ್ರೆಡ್ ಸುದೀರ್ಘ ಕಾಲ ಬಾಳಿಕೆ ಬರಲು ಪೊಟೇಷಿಯಂ ಬ್ರೊಮೇಟ್ ನಂತಹ ಹಾನಿಕಾರಕ ರಾಸಾಯನಿಕಗಳನ್ನು ಬಳಸುತ್ತಾರೆ. ಇದು ಆರೋಗ್ಯಕ್ಕೆ ತೀರಾ ಮಾರಕ.
ತೂಕ ಹೆಚ್ಚುತ್ತದೆ
ಬ್ರೆಡ್ ನ್ನು ಅತಿಯಾಗಿ ಸೇವಿಸುವುದರಿಂದ ಬೊಜ್ಜು ಬೆಳೆಯುತ್ತದೆ. ಇದರಲ್ಲಿರುವ ಸಂಸ್ಕರಿತ ಸಕ್ಕರೆ, ಉಪ್ಪು ಮತ್ತು ಕಾರ್ಬೋಹೈಡ್ರೇಟ್ ಅಂಶಗಳು ನಮ್ಮ ದೇಹ ತೂಕ ಹೆಚ್ಚಿಸುತ್ತದೆ.
ಜೀರ್ಣವಾಗಲ್ಲ
ಇದು ಬೇಗ ಜೀರ್ಣವಾಗಲ್ಲ. ಹಾಗಾಗಿ ತುಂಬಾ ಹೊತ್ತು ನಮ್ಮ ಜಠರದಲ್ಲಿ ಉಳಿದುಕೊಂಡು ಆಹಾರ ವಿಷಯುಕ್ತವಾಗಿ ಮಾಡುತ್ತದೆ.
ಮಧುಮೇಹ
ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿಸುವ ಗುಣ ಬ್ರೆಡ್ ಗಿದೆ. ಇದರಲ್ಲಿ ಅತಿಯಾಗಿ ಗ್ಲೈಸೆಮಿಕ್ ಇಂಡೆಕ್ಸ್ ಇದ್ದು, ಇದು ಸುಲಭವಾಗಿ ಸಕ್ಕರೆ ಅಂಶ ಬಿಡುಗಡೆ ಮಾಡುತ್ತದೆ. ಇದರಿಂದ ಮಧುಮೇಹದ ಅಪಾಯವಿದೆ.
ವಿಷಯುಕ್ತ
ಸಂಸ್ಕರಿತ ಧಾನ್ಯಗಳು ನಮ್ಮ ದೇಹಕ್ಕೆ ಒಳ್ಳೆಯದಲ್ಲ. ಸಂಸ್ಕರಿತ ಆಹಾರಗಳಲ್ಲಿ ವಿಷಕಾರಕಗಳಾದ ಕಾರ್ಬನ್ ಡೈಆಕ್ಸೈಡ್ ಮತ್ತು ಬ್ರೊಮೇಟ್ ಅಂಶ ಹೆಚ್ಚಿದ್ದು, ಇದು ಆರೋಗ್ಯಕ್ಕೆ ಮಾರಕ.