Webdunia - Bharat's app for daily news and videos

Install App

ಅರ್ಧ ಮೊಳ ಮಲ್ಲಿಗೆಯಿಂದ ಅವಳು ಕೊಡೋದು ಬಂಪರ್ ಸುಖ

Webdunia
ಬುಧವಾರ, 18 ಸೆಪ್ಟಂಬರ್ 2019 (14:01 IST)
ಅಂಗಾಂಗಗಳ ಸ್ಪರ್ಶಕ್ರಿಯೆ ಲೈಂಗಿಕ ಚಟುವಟಿಕೆಯ ಒಂದು ಅವಿಭಾಜ್ಯ ಅಂಗವೆ. ಆದರೆ, ಅದಕ್ಕೂ ವಿಭಿನ್ನವಾದ ಮತ್ತು ಅಷ್ಟೇ ಆನಂದದಾಯಕವಾಗಿರುವ ಸುಖ ಕೂಡ ಸ್ಪರ್ಶಿಸದೆ ಸಿಗುತ್ತದೆ. ಇದಕ್ಕೆಲ್ಲ ಕಾರಣ ಮಿದುಳು ನಮಗೆ ನೀಡುವ ಸಂಜ್ಞೆಗಳು.

ಹಸಿರು ಅಂಚಿನ ಕೆಂಪು ಸೆರಗಿನ ಮೈಮೇಲೆಲ್ಲ ಹಳದಿ ಹೂಗಳನ್ನು ಮೆತ್ತಿಕೊಂಡ ಸೀರೆಯನ್ನು ಉಟ್ಟ ಹೆಂಡತಿ, ಗೆಜ್ಜೆ ಘಲಿರೆನ್ನುವಂತೆ ಸದ್ದು ಮಾಡುತ್ತ, ಮುಂದೆ ಸಂಭವಿಸಬಹುದಾಗ ಮಿಲನ ಮಹೋತ್ಸವವನ್ನು ನೆನೆದುಕೊಂಡು ನಾಚಿಕೊಳ್ಳುತ್ತ ಬರುತ್ತಿರುವಾಗ ನಿಮ್ಮ ಉಕ್ಕೇರುವ ಕಾಮಮೋಹವನ್ನು ಒಮ್ಮೆ ಕಲ್ಪಿಸಿಕೊಂಡು ನೋಡಿ.

ಕಚೇರಿಯ ಕೆಲಸ ಮುಗಿಸಿಕೊಂಡು ಕಚೇರಿಗೆ ಹೋಗುವ ಮುನ್ನವೇ ವಾಟ್ಸಾಪಿನಲ್ಲಿ ಕೆಲಸ ಭೋಗಸಿಯಲ್ಲಿ ಮುಳುಗಿರುವ ಹೆಂಡತಿಗೆ ಒಂದು ಸೂಚನೆ ಕೊಟ್ಟುಬಿಡಿ, ಹೋಗುವಾಗ ಕೈಯಲ್ಲಿ ಅರ್ಧಮೊಳ ಘಮಘಮಿಸುವ ಮಲ್ಲಿಗೆಯಿರಲಿ, ನೆಂಟರಿಷ್ಟರು ಸಂಜೆಯ ವೇಳೆಗೆ ಬರದಂತೆ ಎಚ್ಚರಿಕೆವಹಿಸಿ.

ಸಂಜೆ ತಂಪಾದ ಗಾಳಿ ಬೀಸುತ್ತಿದ್ದಾಗ, ಕಿವಿಗಳಿಗೆ ಕಚಗುಳಿಯಿಡುತ್ತ ಏನೋ ಕಥೆ ಹೇಳುತ್ತಿದ್ದಾಗ, ಪಾಂಡ್ಸ್ ಪೌಡರ್ ಹಚ್ಚಿಕೊಂಡ ಹೆಂಡತಿ ಮುದ್ದಾದ ಗಲ್ಲ ಮುತ್ತಿಗೆ ಆಹ್ವಾನ ನೀಡುವ ವೇಳೆಯಾದಾಗ, ಮೈಮನದಲ್ಲಿ ಇದ್ದಕ್ಕಿದ್ದಂತೆ ರಕ್ತಸಂಚಾರ ಹೆಚ್ಚಾಗುವ ಸಮಯದಲ್ಲಿ ಹಾಸಿಗೆಯ ಮೇಲೆ ನಿಮ್ಮಿಬ್ಬರ ದೇಹಗಳು ಮಾತುಕತೆಗೆ ಕುಳಿತುಕೊಳ್ಳಲಿ.

ಗಂಡು ಹೆಣ್ಣಿನ ನಡುವಿನ ಬಂಧ ಬಿಗಿಯಾಗುತ್ತಿದ್ದಂತೆ ನಮ್ಮ ಮಿದುಳಿನ ಕ್ರಿಯೆ ಕೂಡ ತಕ್ಕಂತೆ ಬದಲಾಗುತ್ತ ಸಾಗುತ್ತದೆ. ನಮ್ಮ ನಡೆಗಳಿಗೆ, ವಿಚಾರಗಳಿಗೆ ಪೂರಕವಾಗಿ ನಮ್ಮ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬಂಧ ಇನ್ನಷ್ಟು ಬಲವಾಗುವಂತೆ ಮಿದುಳು ನಮ್ಮನ್ನು ತಯಾರು ಮಾಡುತ್ತದೆ. ಖುಷಿಯ ಉತ್ತುಂಗದಲ್ಲಿದ್ದಾಗ ವಿಶಿಷ್ಟವಾದ ರಾಸಾಯನಿಕಗಳನ್ನು ಕೂಡ ಮಿದುಳು ಸ್ರವಿಸುವಂತೆ ಮಾಡುತ್ತದೆ.

ಒಬ್ಬಂಟಿಯಾಗಿ ಕೂಡ ಲೈಂಗಿಕ ಸುಖವನ್ನು ಪಡೆಯುವ ಹಲವಾರು ದಾರಿಗಳಿವೆ. ಆದರೆ, ಸಂಗಾತಿ ಜೊತೆಯಿದ್ದಾಗ, ಎರಡೂ ದೇಹಗಳು ಮನಸ್ಸುಗಳು ಬೆಸೆಯುವಾಗ ಸಂಭವಿಸುವ ಸ್ಖಲನ ಪ್ರಕ್ರಿಯೆಯಿದೆಯಲ್ಲ ಅದರ ಖುಷಿಯೇ ಬೇರೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಲೈಂಗಿಕ ಕ್ರಿಯೆಯಿಂದಾಗಿ ಎರಡೂ ಮನಸ್ಸುಗಳು ಇನ್ನಷ್ಟು ಹತ್ತಿರವಾಗಬೇಕು ಮತ್ತು ದೇಹಗಳು ಕೂಡ ಸಂಭ್ರಮಿಸಬೇಕು. ಇಲ್ಲದಿದ್ದರೆ ಬರೀ ದೈಹಿಕ ಸುಖದಿಂದ ಮನಸ್ಸುಗಳು ಒಂದಾಗಲು ಸಾಧ್ಯವೇ ಇಲ್ಲ.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ