ಬೆಂಗಳೂರು: ಹೆರಿಗೆ ಎನ್ನುವುದು ಹೆಣ್ಣಿನ ಜೀವನದಲ್ಲಿ ಪ್ರಮುಖ ಘಟ್ಟವಿದ್ದಂತೆ. ಹೆಚ್ಚಿನ ಮಹಿಳೆಯರು ಹೆರಿಗೆಯ ನಂತರದ ಲೈಂಗಿಕ ಜೀವನದ ಬಗ್ಗೆ ಸಾಕಷ್ಟು ಗೊಂದಲವಿಟ್ಟುಕೊಂಡಿರುತ್ತಾರೆ.
ಸಾಮಾನ್ಯವಾಗಿ ಹೆರಿಗೆಯ ನಂತರ ಮಹಿಳೆಯರಿಗೆ ಲೈಂಗಿಕಾಸಕ್ತಿ ಮೊದಲಿನಷ್ಟು ಇರುವುದಿಲ್ಲ ಎನ್ನುತ್ತಾರೆ. ಅದಕ್ಕೇ ಎಷ್ಟೋ ಜನ ದಂಪತಿ ಈ ವಿಷಯಕ್ಕೆ ಪರಸ್ಪರ ಸಂಬಂಧವನ್ನೇ ಹಾಳು ಮಾಡಿಕೊಳ್ಳುವ ಉದಾಹರಣೆ ಕೇಳಿದ್ದೇವೆ.
ಅದಕ್ಕಾಗಿ ತಜ್ಞರು ಒಂದು ಐಡಿಯಾ ಕೊಟ್ಟಿದ್ದಾರೆ. ಡೆಲಿವರಿಯಾದ ಸಂದರ್ಭದಲ್ಲಿ ಮಹಿಳೆಯರಿಗೆ ವಿಶ್ರಾಂತಿ ಸಿಗುವುದೇ ಅಪರೂಪಕ್ಕೆ. ಹೆಚ್ಚಾಗಿ ಮಕ್ಕಳು ಬೆಳಗಿನ ಅವಧಿಯಲ್ಲಿ ಮಲಗಿರುತ್ತಾರೆ. ಈ ಸಂದರ್ಭದಲ್ಲಿ ಲೈಂಗಿಕ ಸಂಬಂಧ ಏರ್ಪಡಿಸಬಹುದು. ಅದೂ ಮಹಿಳೆಯರ ದೇಹ ಈ ಸಂದರ್ಭದಲ್ಲಿ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಆದಷ್ಟು ಅವರಿಗೆ ಕಿರಿ ಕಿರಿ ಉಂಟುಮಾಡುವಂತಹ ಕೆಲಸಕ್ಕೆ ಕೈ ಹಾಕಬೇಡಿ ಮತ್ತು ನೋವಾಗುವಂತೆ ನಡೆದುಕೊಳ್ಳಬೇಡಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.