ಬೆಂಗಳೂರು: ಆಲೂಗಡ್ಡೆ ನಮ್ಮ ಅಡುಗೆ ಮನೆಗಳಲ್ಲಿ ಇರುವ ಸಾಮಾನ್ಯ ತರಕಾರಿ. ಆಲೂಗಡ್ಡೆಯಲ್ಲಿ ಹಲವು ಆರೋಗ್ಯಕರ ಅಂಶಗಳಿವೆ. ಎಲ್ಲಕ್ಕಿಂತ ಹೆಚ್ಚು ಇದು ನಮ್ಮ ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಆಲೂಗಡ್ಡೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ಫೈಬರ್, ಪೊಟೇಷಿಯಂ ಮುಂತಾದ ಅಂಶಗಳು ಹೇರಳವಾಗಿವೆ. ಆಲೂಗಡ್ಡೆಯನ್ನು ಬಿಲ್ಲೆಗಳಾಗಿ ಮಾಡಿ ಕಪ್ಪು ವರ್ತುಲಗಳಿರವ ಕಡೆಗೆ ಉಜ್ಜಿಕೊಂಡು ಅವುಗಳನ್ನು ನಿವಾರಿಸಬಹುದು ಎಂದು ಕೇಳಿದ್ದೇವೆ.
ಅದೇ ರೀತಿ ಇದರ ಜ್ಯೂಸ್ ಕುಡಿಯುವುದರಿಂದಲೂ ನಮ್ಮ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಬಹುದು. ಇದರ ಜ್ಯೂಸ್ ನ ಸೇವನೆ ಕಣ್ಣಿನ ಕೆಳಗಿರುವ ಕಪ್ಪು ವರ್ತುಲವನ್ನು ಬಹುಬೇಗನೇ ನಿವಾರಿಸುತ್ತದೆ. ಅಲ್ಲದೆ, ಚರ್ಮಕ್ಕೆ ಹೊಳಪು ನೀಡುವುದರ ಜತೆಗೆ ಸುಕ್ಕುಗಟ್ಟುವುದನ್ನು ತಡೆಯುತ್ತದೆ. ಇದರಿಂದ ನೀವು ಸದಾ ಯಂಗ್ ಆಗಿ ಕಾಣಬಹುದು.