ನ್ಯೂಯಾರ್ಕ್: ಸಣ್ಣ ವಯಸ್ಸಿನ ಚೆಂದದ ವೈದ್ಯರು ಚಿಕಿತ್ಸೆ ನೀಡಿದರೆ ವಯಸ್ಸಾದ ರೋಗಿಗಳು ಬೇಗ ಹುಷಾರಾಗ್ತಾರಂತೆ. ಹೀಗೊಂದು ವಿಶಿಷ್ಟ ಸಂಗತಿಯನ್ನು ಸಂಶೋಧಕರು ಕಂಡುಕೊಂಡಿದ್ದಾರೆ.
ಹಾರ್ವರ್ಡ್ ಯೂನಿವರ್ಸಿಟಿಯ ಸಂಶೋಧಕರು ನಡೆಸಿದ ಸರ್ವೇಯಲ್ಲಿ ಈ ವಿಷಯ ಬಹಿರಂಗವಾಗಿದೆ. 30 ವರ್ಷದೊಳಗಿನ ವೈದ್ಯರು ಚಿಕಿತ್ಸೆ ನೀಡಿದರೆ ಎಂತಹಾ ಭಯಂಕರ ಖಾಯಿಲೆಯವರೂ ಬೇಗನೇ ಗುಣಮುಖರಾಗುತ್ತಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
65 ವರ್ಷಕ್ಕಿಂತ ಮೇಲ್ಪಟ್ಟ ರೋಗಿಗಳನ್ನು ಸಂದರ್ಶಿಸಿ ಸಂಶೋಧಕರು ಈ ಸತ್ಯ ಕಂಡುಕೊಂಡಿದ್ದಾರೆ. ಬಹುಶಃ ಪುರುಷ ಮತ್ತು ಮಹಿಳಾ ವೈದ್ಯರು ಟ್ರೀಟ್ ಮಾಡುವ ರೀತಿ ವ್ಯತ್ಯಾಸವಾಗಿರುವುದಕ್ಕೇ ಈ ಬದಲಾವಣೆ ಇರಬಹುದು ಎಂದು ಸಂಶೋಧಕರು ಹೇಳುತ್ತಾರೆ.
ಮಹಿಳಾ ವೈದ್ಯರು ಟ್ರೀಟ್ ಮಾಡಿದ ರೋಗಿಗಳು ಬೇಗ ಮೃತರಾಗುವ ಸಾಧ್ಯತೆ ಶೇಕಡಾ ನಾಲ್ಕರಷ್ಟು ಮತ್ತು ಮತ್ತೊಮ್ಮೆ ಆಸ್ಪತ್ರೆಗೆ ಅಡ್ಮಿಟ್ ಆಗುವ ಸಾಧ್ಯತೆ ಶೇಕಡಾ ಐದರಷ್ಟು ಕಡಿಮೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಎಂತಹಾ ಕಾಲ ಬಂತು ನೋಡಿ. ಕೈಲಾಗದವರಿಗೂ ಸುಂದರಿಯರೇ ಬೇಕು ನೋಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ