ಬೆಂಗಳೂರು: ಬೆಳ್ಳಂ ಬೆಳಿಗ್ಗೆ ಬೆಡ್ ಕಾಫಿ ಕುಡಿಯುವುದರ ಬದಲು ನೀರು ಸೇವನೆ ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ. ನಮ್ಮ ದೇಹ ಶೇಕಡಾ 75 ರಷ್ಟು ಭಾಗ ನೀರಿನಿಂದ ಸಮತೋಲನಗೊಂಡಿರಬೇಕಂತೆ. ಹೀಗಾಗಿ ದಿನಾ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 1 ರಿಂ ದ ನಾಲ್ಕು ಲೋಟ ನೀರು ಸೇವನೆ ಮಾಡಬೇಕು. ಇದರಿಂದ ಸಿಗುವ ಆರೋಗ್ಯಕರ ಲಾಭಗಳು ಏನೆಲ್ಲಾ ನೋಡೋಣ.
ನಮ್ಮ ದೇಹಕ್ಕೆ ಅಗತ್ಯವಿಲ್ಲದ ಟಾಕ್ಸಿನ್ ಗಳನ್ನು ಹೊರ ಹಾಕಲು ನೀರು ಅತೀ ಅಗತ್ಯ. ರಾತ್ರಿ ನಾವು ಮಲಗಿರುವ ವೇಳೆ ನಮ್ಮ ದೇಹದಲ್ಲಿರುವ ಅವಯವಗಳು ಶುಚಿ ಕೆಲಸ ಮಾಡುತ್ತವಂತೆ. ಹೀಗಾಗಿ ಬೆಳಿಗ್ಗೆ ನೀರು ಕುಡಿಯುವುದರಿಂದ ದೇಹಕ್ಕೆ ಹೊಸ ಚೈತನ್ಯ ಒದಗಿಸಿದಂತಾಗುತ್ತದೆ.
ಇನ್ನು ತಂಬಾಕು ಸೇವನೆ, ಧೂಮಪಾನ, ಜಂಕ್ ಫುಡ್ ಸೇವನೆ ಮಾಡುವವರಂತೂ ಖಾಲಿ ಹೊಟ್ಟೆಯಲ್ಲಿ ನೀರು ಸೇವಿಸುವುದು ತುಂಬಾ ಒಳ್ಳೆಯದು. ಇಂತಹ ದುಶ್ಚಟಗಳ ಕೆಟ್ಟ ಪರಿಣಾಮಗಳು ದೇಹದ ಮೇಲಾಗದಂತೆ ನೀರು ನಮ್ಮನ್ನು ಕಾಪಾಡುತ್ತದೆ.
ಇನ್ನು ಚರ್ಮದ ಆರೋಗ್ಯಕ್ಕೆ ಮಲಬದ್ಧತೆಯಿರುವವರಿಗೆ ಖಾಲಿ ಹೊಟ್ಟೆಯಲ್ಲಿ ನೀರು ಸೇವನೆ ಅತೀ ಅಗತ್ಯ. ಅಲ್ಲದೆ ಹೊಟ್ಟೆ ಉರಿ, ಗ್ಯಾಸ್ಟ್ರಿಕ್ ಸಮಸ್ಯೆಯಿರುವವರೂ ಖಾಲಿ ಹೊಟ್ಟೆಯಲ್ಲಿ ನೀರು ಸೇವಿಸುವುದರಿಂದ ಹೊಟ್ಟೆಯಲ್ಲಿ ಎಸಿಡಿಟಿ ಮಟ್ಟ ಕಡಿಮೆಯಾಗಿ ಆಹಾರ ಸೇವನೆ ಸುಗಮವಾಗುತ್ತದೆ. ಇಷ್ಟೇ ಅಲ್ಲದೆ, ಖಾಲಿ ಹೊಟ್ಟೆಯಲ್ಲಿ ನೀರು ಸೇವಿಸುವುದರಿಂದ ಹೊಸ ಚೈತನ್ಯ ಉತ್ಸಾಹ ಮೂಡಿ ದಿನವಿಡೀ ಉಲ್ಲಾಸದಾಯಕವಾಗಿರುವಂತೆ ಮಾಡುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ