ಬೆಂಗಳೂರು : ಹೆಚ್ಚಿನವರ ಕೂದಲು ತುದಿಯಲ್ಲಿ ಕವಲು ಒಡೆದಿರುವುದನ್ನು ಗಮನಿಸಿರಬಹುದು. ಕೂದಲು ಈ ರೀತಿಯಾಗಿ ಕವಲೊಡೆದಾಗ ಅದು ಮತ್ತೆ ಬೆಳೆಯುವುದಿಲ್ಲ. ಇದರಿಂದ ಕೂದಲು ಉದ್ದವಾಗಿ ಬೆಳೆಯಬೇಕು ಎಂದು ಹಂಬಲಿಸುವವರ ಆಸೆ ಈಡೇರುವುದಿಲ್ಲ.ಕೂದಲು ಕವಲೊಡೆಯುವುದನ್ನು ತಡೆಯಲು ಒಂದು ಎಣ್ಣೆ ಇದೆ. ಅದನ್ನು ಹಚ್ಚಿದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ.
ಆ ಎಣ್ಣೆ ಯಾವುದೆಂದರೆ ಸಾಸಿವೆ ಎಣ್ಣೆ. ಇದನ್ನು ಬಳಸುವುದರಿಂದ ಕೂದಲು ಕವಲೊಡೆಯುವುದಿಲ್ಲ. ಅದನ್ನು ಹೇಗೆ ಬಳಸಬೇಕೆಂದರೆ 4 ಚಮಚ ಸಾಸಿವೆ ಎಣ್ಣೆ, 1 ಚಮಚ ಮೆಂತ್ಯ ಪುಡಿ ಎರಡನ್ನು ಮಿಕ್ಸ್ ಮಾಡಿ ಬಿಸಿ ಮಾಡಿ (ಕುದಿಸಬಾರದು) ನಂತರ ಅದನ್ನು ಒಂದು ಗ್ಲಾಸ್ ನಲ್ಲಿ ಸ್ಟೋರ್ ಮಾಡಿ ಇಡಿ. ಈ ಎಣ್ಣೆಯನ್ನು ಕೂದಲಿಗೆ ಹಚ್ಚುವಾಗ ಸ್ವಲ್ಪ ಬಿಸಿ ಮಾಡಿ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ನಂತರ 1 ಗಂಟೆ ಬಿಟ್ಟು ಸ್ನಾನ ಮಾಡಿ. ಕೂದಲಿಗೆ ಹರ್ಬಲ್ ಶಾಂಪೂವನ್ನೇ ಯಾವಾಗಲೂ ಬಳಸಿ. ಇದರಿಂದ ಕೂದಲು ಕವಲೊಡೆಯುವುದು ನಿವಾರಣೆಯಾಗುವುದರ ಜೊತೆಗೆ ತಲೆಹೊಟ್ಟು ಹಾಗು ಕೂದಲು ಬೆಳ್ಳಗಾಗುವ ಸಮಸ್ಯೆಯು ಇರುವುದಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ