ಬೆಂಗಳೂರು : ಕೆಲವರು ಕೂದಲಿನ ಹಲವು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಅಂತವರು ಈ ದಾಸವಾಳದ ಹೇರ್ ಆಯಲಿಲ್ ತಯಾರಿಸಿ ಹಚ್ಚಿ.
2 ದಾಸವಾಳ ಹೂ, 8 ದಾಸವಾಳ ಎಲೆ ಸೇರಿಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಗೆ ತೆಂಗಿನೆಣ್ಣೆ, ಆಮ್ಲಾ ಪುಡಿ 1 ಚಮಚ, ಮೆಂತ್ಯ ಬೀಜ 1 ಚಮಚ, ಕರಿಬೇವು ಎಲೆ ಸೇರಿಸಿ ಚೆನ್ನಾಗಿ ಕುದಿಸಿ. ಬಳಿಕ ತಣ್ಣಗಾದ ಮೇಲೆ ಗ್ಲಾಸ್ ನಲ್ಲಿ ಸ್ಟೋರ್ ಮಾಡಿ ಇಡಿ. ಇದನ್ನು ಕೂದಲಿಗೆ ಹಚ್ಚಿ ಸ್ನಾನ ಮಾಡುವುದರಿಂದ ಕೂದಲಿನ ಯಾವುದೇ ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ.