Publish Date: Fri, 05 Oct 2018 (08:47 IST)
Updated Date: Fri, 05 Oct 2018 (08:49 IST)
ಬೆಂಗಳೂರು: ವಿಮಾನದಲ್ಲಿ ಗಂಟೆಗಟ್ಟಲೆ ಪ್ರಯಾಣಿಸಬೇಕೆಂದರೆ ಟೈಮ್ ಪಾಸ್ ಗೆಂದು ಮದ್ಯಪಾನ ಮಾಡುತ್ತಿದ್ದರೆ ತಕ್ಷಣ ಆ ಅಭ್ಯಾಸ ಬಿಡುವುದು ಒಳ್ಳೆಯದು.
ಯಾಕೆಂದರೆ ವಿಮಾನದಲ್ಲಿ ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎನ್ನುವುದನ್ನು ನೀವು ತಿಳಿದುಕೊಳ್ಳಲೇಬೇಕು.
ಆರೋಗ್ಯ ತಜ್ಞರ ಪ್ರಕಾರ ವಿಮಾನ ಹಾರಾಡುತ್ತಿರಬೇಕಾದರೆ ಅಲ್ಲಿ ಉಷ್ಣತೆ ಪ್ರಮಾಣ ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ಮದ್ಯಪಾನ ಮಾಡುವುದರಿಂದ ನಮ್ಮ ದೇಹ ನಿರ್ಜಲೀಕರಣಕ್ಕೊಳಗಾಗುವ ಸಾಧ್ಯತೆಯಿದೆ. ಪರಿಣಾಮ ತಲೆಸುತ್ತು, ವಾಕರಿಕೆ, ನಿಶ್ಯಕ್ತಿ ಇತ್ಯಾದಿ ಕಾಣಿಸಿಕೊಳ್ಳಬಹುದು. ಅಲ್ಲದೆ, ಇದರಿಂದ ಮೆದುಳು, ಕಿಡ್ನಿ ಮೇಲೂ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.