ಬೆಂಗಳೂರು: ಪಾದಗಳಲ್ಲಿ ಬಿರುಕುಗಳನ್ನು ನೋಡಿದಾಗ ಅಸಹ್ಯದ ಜೊತೆಗೆ ಬೇಸರವು ಆಗಿತ್ತದೆ. ಬಿರುಕುಗಳಿಂದ ಜನರು ನಮ್ಮನ್ನು ಕೀಳಾಗಿ ಕಾಣುತ್ತಾರೆ ಎಂಬ ಅನಿಸಿಕೆ ಕೆಲವರಲ್ಲಿದೆ. ಇದರಿಂದ ಪಾದಗಳ ಬಿರುಕುಗಳನ್ನು ಬಚ್ಚಿಡುತ್ತಾರೆ. ಇದರ ಬದಲು ಮೂರು ರಾತ್ರಿಯಲ್ಲಿ ಬಿರುಕುಗಳನ್ನು ಕಡಿಮೆಯಾಗಿಸುವ ನೈಸರ್ಗಿಕ ವಿಧಾನಗಳನ್ನು ಬಳಸಿ.
ಪಾದಗಳಲ್ಲಿ ತೇವಾಂಶ ಕಡಿಮೆಯಾಗುವುದರಿಂದ, ಧೂಳು, ಕೊಳೆ ಸೇರಿಕೊಳ್ಳುವುದರಿಂದ ಬಿರುಕು ಬಿಡುತ್ತದೆ. ಇದರಿಂದ ನಡೆಯಲು ತೊಂದರೆಯಾಗುವುದರ ಜೊತೆಗೆ ಪಾದದಲ್ಲಿ ರಕ್ತ ಕೂಡ ಬರುತ್ತದೆ. ಸಾಸಿವೆ ಎಣ್ಣೆಯಲ್ಲಿ ಮೇಣವನ್ನು ಬೇರೆಸಿ ಮಲಗುವ ಮುಂಚೆ ಬಿರುಕುಗಳಿಗೆ ಹಚ್ಚಿಕೊಂಡರೆ ಬಿರುಕು ಕಡಿಮೆಯಾಗುತ್ತದೆ. ಮೆಹಂದಿ ಸೊಪ್ಪನ್ನು ನುಣ್ಣಗೆ ಅರೆದು ಪಾದಗಳಿಗೆ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆದರೆ ಬಿರುಕು ಕಡಿಮೆಯಾಗುತ್ತದೆ.
ಪ್ರತಿದಿನ ರಾತ್ರಿ ಮಲಗುವ ಮುಂಚೆ ಎಳ್ಳೆಣ್ಣೆ ಅಥವಾ ಬಾಳೆಹಣ್ಣಿನ ತಿರುಳು ಹಚ್ಚಿಕೊಳ್ಳಬೇಕು. ಅರಿಶಿನ, ತುಳಸಿ, ಕರ್ಪೂರಕ್ಕೆ ಆಲೊವೆರಾ ಜೆಲ್ ಸೇರಿಸಿ ಹಚ್ಚುವುದರಿಂದ ಬಿರುಕು ಕಡಿಮೆಯಾಗುತ್ತದೆ. ಪ್ಲಾಸ್ಟಿಕ್ ಚಪ್ಪಲಿಯ ಬದಲು ಚರ್ಮದ ಚಪ್ಪಲಿ ಬಳಸುವುದು ಉತ್ತಮ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ