Publish Date: Sun, 17 Nov 2019 (14:46 IST)
Updated Date: Sun, 17 Nov 2019 (14:49 IST)
ಉಪಚುನಾವಣೆ ಕಾವು ಜೋರಾಗುತ್ತಿದ್ದಂತೆ ಕುಂದಾನಗರಿ ಖ್ಯಾತಿಯ ಜಿಲ್ಲೆಯಲ್ಲಿ ಜಾರಕಿಹೊಳಿ ಸಹೋದರರ ವಾಗ್ಯುದ್ಧ ತಾರಕಕ್ಕೇರಿದೆ.
ರಮೇಶ್ ಜಾರಕಿಹೊಳಿ ಸುಳ್ಳು ಹೇಳೋದ್ರಲ್ಲಿ ಪಿ ಹೆಚ್ ಡಿ ಪಡೆದಿದ್ದಾನೆ. ಹೀಗಂತ ಅವರ ಸಹೋದರ, ಮಾಜಿ ಸಚಿವ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ.
ಎಸ್.ಎಂ.ಕೃಷ್ಣ, ಕೆ.ಎಚ್ ಪಾಟೀಲ್, ಆ ನಂತರ ಸಿದ್ದರಾಮಯ್ಯ ನಮ್ಮ ಗುರು ಅಂತೆಲ್ಲ ಹೇಳಿಕೊಂಡು ತನ್ನ ಅಗತ್ಯಕ್ಕೆ ತಕ್ಕಂತೆ ಗುರುಗಳನ್ನು ಬದಲಿಸಿದ್ದಾರೆ ಅಂತ ವಾಗ್ದಾಳಿ ನಡೆಸಿದ್ದಾರೆ.
ಮೊಬೈಲ್ ಹ್ಯಾಂಡ್ ಸೆಟ್ ಇದ್ದಂತೆ ರಮೇಶ್ ತಲೆ ಇದೆ. ಅದು ಯಾವಾಗ ಬೇಕಾದರೂ, ಯಾವ ಸಂದರ್ಭದಲ್ಲಿ ಬೇಕಾದರೂ ಹ್ಯಾಂಗ್ ಆಗಬೋದು ಅಂತ ಸತೀಶ್ ಜಾರಕಿಹೊಳಿ ಲೇವಡಿ ಮಾಡಿದ್ದಾರೆ.