ಬೆಂಗಳೂರು: ಇತ್ತೀಚೆಗಿನ ಒತ್ತಡ ಜೀವನದಿಂದಾಗಿ ಹೃದಯಾಘಾತವೆನ್ನುವುದು ಯಾವ ಕ್ಷಣದಲ್ಲಿ, ಯಾವ ವಯಸ್ಸಿನವರಿಗೆ ಬೇಕಾದರೂ ಸಂಭವಿಸಬಹುದು. ಹೃದಯಾಘಾತದ ಅಪಾಯ ತಡೆಯಲು ಕೆಲವು ಹಣ್ಣುಗಳ ಸೇವನೆ ಮಾಡಿದರೆ ಸಾಕು. ಅವು ಯಾವುವು ನೋಡೋಣ.
ನೇರಳೆ ಹಣ್ಣು ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಹಣ್ಣು ಎನ್ನಲಾಗುತ್ತದೆ. ಅದೇ ರೀತಿ ಇದು ಹೃದಯದ ಆರೋಗ್ಯಕ್ಕೂ ಉತ್ತಮ.
ಆದಷ್ಟು ಆಹಾರದಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿರುವ ಕಿತ್ತಳೆ, ನಿಂಬೆ, ನೆಲ್ಲಿಕಾಯಿಯಂತಹ ಆಹಾರ ವಸ್ತುಗಳನ್ನು ಸೇರಿಸಿ. ಅದೇ ರೀತಿ ಫೈಬರ್ ಅಂಶ ಹೆಚ್ಚಿರುವ ಓಟ್ಸ್, ಗೋಧಿ ಹಿಟ್ಟು ಸೇವಿಸಿ.
ವಿಟಮಿನ್ ಇ, ಒಮೆಗಾ ಪ್ಯಾಟಿ ಆಸಿಡ್ ಇರುವ ಬಾದಾಮಿ, ಗೋಡಂಬಿಯಂತಹ ಒಣಹಣ್ಣುಗಳನ್ನು ಸೇವಿಸಿ. ಹೆಚ್ಚು ಸೊಪ್ಪು ತರಕಾರಿಗಳ ಸೇವನೆಯಿಂದಲೂ ಹೃದಯ ಹೆಚ್ಚು ಆರೋಗ್ಯವಂತವಾಗಿರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ