ಬೆಂಗಳೂರು: ಗರ್ಭಿಣಿ ಮಹಿಳೆಯರಿಗೆ ಅಧಿಕ ರಕ್ತದೊತ್ತಡವಿದ್ದರೆ ಮುಂದೆ ಹೃದಯಾಘಾತ ಅಥವಾ ಹೃದಯ ಸಂಬಂಧೀ ಸಮಸ್ಯೆ ಬರುವ ಅಪಾಯ ಹೆಚ್ಚು ಎಂದು ಅಧ‍್ಯಯನವೊಂದು ಹೇಳಿದೆ.
ಅಧಿಕ ರಕ್ತದೊತ್ತಡವಿರುವ ಗರ್ಭಿಣಿ ಮಹಿಳೆಯರು ಮುಂದೊಂದು ದಿನ ನಂತರದ ಜೀವನದಲ್ಲಿ ಹೃದಯ ಸಂಬಂಧೀ ಖಾಯಿಲೆಗೆ ತುತ್ತಾಗುವ ಅಪಾಯ ಹೆಚ್ಚು ಎಂದು ಬ್ರಿಟನ್ ನ ಸಂಶೋಧಕರು ಹೇಳಿದ್ದಾರೆ.
ಮೊದಲ ಗರ್ಭಾವಸ್ಥೆಯಲ್ಲಿ ರಕ್ತದೊತ್ತಡ ಅಧಿಕವಾಗಿದ್ದರೆ ಅಂತಹ ಮಹಿಳೆಯರಿಗೆ ಹೃದಯ ಸಂಬಂಧೀ ಖಾಯಿಲೆ ಬರುವ ಸಾಧ‍್ಯತೆ ಶೇ.45 ರಷ್ಟಿರುತ್ತದೆ ಎಂದು ಅಧ್ಯಯನದ ಮೂಲಕ ಕಂಡುಕೊಂಡಿದ್ದಾರೆ.