Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡಿ ಕಣ್ಣು ನೋವು ಬರುತ್ತಿದೆಯೇ? ಹಾಗಿದ್ದರೆ ಈ ಕೆಲಸ ಮಾಡಿ!

ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡಿ ಕಣ್ಣು ನೋವು ಬರುತ್ತಿದೆಯೇ? ಹಾಗಿದ್ದರೆ ಈ ಕೆಲಸ ಮಾಡಿ!
ಬೆಂಗಳೂರು , ಭಾನುವಾರ, 5 ಜುಲೈ 2020 (09:10 IST)
ಬೆಂಗಳೂರು: ಇಂದು ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಳವಾಗಿದೆ. ಆದರೆ ಗಂಟೆಗಟ್ಟಲೆ ಲ್ಯಾಪ್ ಟಾಪ್ ಮುಂದೆ ಕೂತು ಕಣ್ಣು ನೋವು ಸಮಸ್ಯೆ ಬರುತ್ತಿದೆ ಎಂದಾದರೆ ಈ ಸಣ್ಣ ವ್ಯಾಯಾಮ ಮಾಡಿ ಕಣ್ಣಿನ ಮೇಲಿನ ಒತ್ತಡ ಕಡಿಮೆ ಮಾಡಬಹುದು.


ನೇರ ಭಂಗಿಯಲ್ಲಿ ಕೂತುಕೊಳ್ಳಿ. ಬಳಿಕ ನಿಮ್ಮ ತೋರುಬೆರಳನ್ನು ಕಣ್ಣಿನ ಎದುರು ಮುಖದಿಂದ ಕೊಂಚ ದೂರದಲ್ಲಿ ಎತ್ತಿ ಹಿಡಿಯಿರಿ. ಈಗ ಆ ತೋರು ಬೆರಳನ್ನು ನಿಧಾನವಾಗಿ ಅತ್ತಿಂದಿತ್ತ ಚಲಾಯಿಸಿ. ಆಗ ಆ ನಿಮ್ಮ ಕಣ್ಣುಗಳೂ ತೋರುಬೆರಳಿನೊಂದಿಗೇ ಅತ್ತಿಂದಿತ್ತ ನೋಡುತ್ತಿರಲಿ.

ಬಳಿಕ ಕೆಲವು ಕ್ಷಣ ನಿಮ್ಮ ದೃಷ್ಟಿಯನ್ನು ಬೇರೆ ಕಡೆಗೆ ಹಾಯಿಸಿ. ಮತ್ತೆ ತೋರುಬೆರಳಿನ ಚಲನೆಯನ್ನು ಮುಂದುವರಿಸಿ. ಇದೇ ರೀತಿ ಕೆಲವು ಸೆಕೆಂಡು ಮಾಡುತ್ತಿದ್ದರೆ ಕಣ್ಣಿಗೆ ಕೊಂಚ ವ್ಯಾಯಾಮ ಸಿಕ್ಕಂತಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳ್ಳುಳ್ಳಿಯನ್ನು ಊಟಕ್ಕೂ ಮೊದಲು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಏನಾಗುತ್ತದೆ ಗೊತ್ತಾ?