ಬೆಂಗಳೂರು: ಗರ್ಭಿಣಿ ಮಹಿಳೆ ಹಾಗಿರಬೇಕು, ಹೀಗಿರಬೇಕು ಎಂದು ತಲೆಗೊಂದು ಸಲಹೆ ಕೊಡುವವರೇ ಜಾಸ್ತಿ. ಹಾಗಿರುವಾಗ ಗರ್ಭಿಣಿ ಮಹಿಳೆ ಏನು ಮಾಡಬಾರದು? ನೋಡೋಣ..
ಮದ್ಯಪಾನ ಅಥವಾ ಮಾದಕ ಅಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಇದರಿಂದ ಹುಟ್ಟುವ ಮಗು ಅಂಗವೈಕಲ್ಯ ಅಥವಾ ಅಂತಹ ಕುಂದು ಕೊರತೆಗಳಾಗಬಹುದು.
ಕೆಫೈನ್ ಅಂಶವಿರುವ ಆಹಾರಗಳು ಮೊದಲ ಮೂರು ತಿಂಗಳು ಸೇವನೆ ಮಾಡುವುದು ಬೇಡ. ಇದರಿಂದ ಗರ್ಭಪಾತವಾಗುವ ಸಂಭವ ಜಾಸ್ತಿ. ಇದಲ್ಲದೆ, ಹುಟ್ಟುವ ಮಗುವಿನ ತೂಕ ಕಡಿಮೆಯಾಗುವುದು, ಅವಧಿ ಪೂರ್ಣ ಜನನ ಮುಂತಾದ ಸಮಸ್ಯೆಗಳು ಬರಬಹುದು.
ಇದಲ್ಲದೆ, ಹೆಚ್ಚು ಕೊಬ್ಬಿನಂಶವಿರುವ ಆಹಾರ ಸೇವನೆ ಕೂಡಾ ಒಳ್ಳೆಯದಲ್ಲ. ಹಾಗೇ ಅಧಿಕ ಕ್ಯಾಲರಿಯುಕ್ತ ಮೀನಿನ ಆಹಾರ ಸೇವನೆ ಉತ್ತಮವಲ್ಲ. ಹಾಗೇ ಸರಿಯಾಗಿ ಬೇಯಿಸದ ಆಹಾರ ಸೇವಿಸುವುದರಿಂದ ಬ್ಯಾಕ್ಟೀರಿಯಾ, ರೋಗಾಣುಗಳು ದೇಹ ಪ್ರವೇಶಿಸುವ ಸಾಧ್ಯತೆ ಹೆಚ್ಚು. ಆದಷ್ಟು ಆರೋಗ್ಯಕರ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ.ಇ
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ