ಬೆಂಗಳೂರು: ಬೆಳಗಿನ ಉಪಾಹಾರ ಎನ್ನುವುದು ಮನುಷ್ಯನಿಗೆ ತುಂಬಾ ಮುಖ್ಯ. ಬೆಳಗ್ಗೆ ಏನು ತಿನ್ನುವುದರ ಮೇಲೆ ನಮ್ಮ ದೈನಂದಿನ ಆರೋಗ್ಯ ನಿಂತಿದೆ.
ಬೆಳಗ್ಗೆ ಏನೂ ತಿಂಡಿ ಮಾಡಿಲ್ಲವೆಂದರೆ ಪಕ್ಕನೆ ತಿನನ್ನಲು ನೆನಪಾಗುವುದೇ ಬಾಳೆಹಣ್ಣು. ಆದರೆ ಬಾಳೆಹಣ್ಣನ್ನು ಉಪಾಹಾರಕ್ಕೆ ಬಳಸಬಾರದು. ಅದರಿಂದ ಆರೋಗ್ಯದ ಮೇಲೆ ಹಲವು ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞರು.
ಬಾಳೆಹಣ್ಣಿನಲ್ಲಿರುವ ನೈಸರ್ಗಿಕ ಸಕ್ಕರೆ ಅಂಶ ದೇಹದಲ್ಲಿ ಬೇಗನೆ ಹೆಚ್ಚುವಂತೆ ಮಾಡುತ್ತದೆ. ಅದೇ ರೀತಿ ಬೇಗನೇ ಸಕ್ಕರೆ ಅಂಶ ಕರಗಲು ಖಾರಣವಾಗುತ್ತದೆ. ಬಾಳೆಹಣ್ಣಿನಿಂದ ಹೊಟ್ಟೆ ತುಂಬುವುದು ಬೇಗ. ಹಾಗೇ, ಅಷ್ಟೇ ಬೇಗ ಸುಸ್ತಾಗುತ್ತೀರಿ.
ಬಾಳೆ ಹಣ್ಣಿನಲ್ಲಿ ಕ್ಷಾರದ ಅಂಶ ಹೆಚ್ಚು. ಹಾಗಾಗಿ ಅದು ಉದರದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹಾಗಾಗಿ ಬಾಳೆಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದನ್ನು ಆದಷ್ಟು ಕಡಿಮೆ ಮಾಡಿ ಎನ್ನುವುದು ತಜ್ಞರ ಅಭಿಪ್ರಾಯ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ