ಬೆಂಗಳೂರು : ಇತ್ತಿಚೆಗೆ ಸ್ಯಾನಿಟರಿ ಪ್ಯಾಡ್ ಗಳ ಬಗ್ಗೆ ಹೆಚ್ಚುತ್ತಿರುವ ಅರಿವಿನ ನಡುವೆ, ಕೆಲವೊಮ್ಮೆ ತರ ತರಹದ ಜಾಹೀರಾತುಗಳು ಹದಿವಯಸ್ಸಿನವರನ್ನು ದಿಕ್ಕು ತಪ್ಪಿಸುತ್ತದೆ. ಹಾಗಾಗಿ ಈ ಬಗ್ಗೆ ಸೂಕ್ತ ಮಾರ್ಗದರ್ಶನ ಅಗತ್ಯ.
ಸ್ಯಾನಿಟರಿ ಪ್ಯಾಡ್ ಗಳಲ್ಲಿ ಉಪಯೋಗಿಸುವ ಪ್ಲಾಸ್ಟಿಕ್ ವಸ್ತುಗಳು ಮುಖ್ಯವಾಗಿ ಬಿಸ್ಪಿನಾಲ್ ನಂತಹ ರಾಸಾಯನಿಕ ವಸ್ತುಗಳು, ಭ್ರೂಣದ ಬೆಳವಣಿಗೆ, ಮೆದುಳಿನ ಬೆಳವಣಿಗೆ ಹಾಗುನ ಥೈರಾಯಿಡ್ ಗ್ರಂಥಿಯ ಕಾರ್ಯದಲ್ಲಿ ವ್ಯತ್ಯಾಸವನ್ನು ಉಂಟುಮಾಡಿ ಹಾರ್ಮೋನ್ ಗಳ ವ್ಯತ್ಯಾಸಕ್ಕೂ ಕಾರಣವಾಗಬಹುದು. ಇದರಿಂದ ಮಧುಮೇಹ, ಅಂಡಾಶಯದ ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೂ ತುತ್ತಾಗಬಹುದು.
ಪ್ಯಾಡ್ ಗೆ ಉಪಯೋಗಿಸುವ ಹತ್ತಿಯಲ್ಲಿ ಕೀಟನಾಶಕಗಳು ನಮ್ಮ ಶರೀರವನ್ನು ಸೇರುತ್ತವೆ. ಅವುಗಳಲ್ಲಿರುವ ಫ್ಯೂರಾನ್ ಕ್ಯಾನ್ಸರ್ ಕಾರಕವಾಗಿದೆ. ಹತ್ತಿಯನ್ನು ಬಿಳಿಯಾಗಿಸಲು ‘ಡಯಾಕ್ಸಿನ್’ ಎಂಬ ರಾಸಾಯನಿಕವನ್ನು ಉಪಯೋಗಿಸುತ್ತಾರೆ. ಇದು ಚರ್ಮವನ್ನು ಕಪ್ಪಾಗಿಸಿ ಯಕೃತ್ತಿನ ಕಾರ್ಯ ಏರುಪೇರಾಗುವಂತೆ ಮಾಡುತ್ತದೆ. ಇದರ ದೀರ್ಘಾವಧಿ ಬಳಕೆಯಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಹಾಗೆ ಒಂದೇ ಪ್ಯಾಡನ್ನು ದೀರ್ಘಾವಧಿ ಬಳಸಿದಾಗ ಅಲ್ಲಿ ತೇವಾಂಶ ಹೆಚ್ಚಾಗಿ ‘ಸ್ಟ್ಯಾಪ್ ಆರಿಯಾಸ್’ ಎನ್ನುವ ಬ್ಯಾಕ್ಟೀರಿಯಾ ಸೋಂಕು ಉಂಟಾಗುವ ಸಂಭವವಿರುತ್ತದೆ.
ಇತ್ತಿಚೆಗೆ ಸುರಕ್ಷಿತವಾದ ಅತ್ಯುತ್ತಮವಾಗಿ ವಿನ್ಯಾಸಗೊಂಡ ಮೆನ್ ಸ್ಟ್ರುವಲ್ ಕಪ್ಸ್ ಸಿಗುತ್ತಿವೆಯಾದರೂ ಅದನ್ನು ಉಪಯೋಗಿಸುವ ಬಗ್ಗೆ ಜನಸಾಮಾನ್ಯರಿಗೆ ಹೆಚ್ಚು ತಿಳಿದಿಲ್ಲ. ಇದನ್ನು ಸ್ವಚ್ಚವಾಗಿಸಿ ಪುನಃ ಬಳಸಬಹುದು. ಈ ಬಗ್ಗೆ ಹೆಚ್ಚು ಅರಿವು ಉಂಟಾದಲ್ಲಿ ಕಡಿಮೆ ಪ್ಲಾಸ್ಟಿಕ್ ಹಾಗು ಹತ್ತಿ ಬಳಕೆಯಾಗಿ ಪರಿಸರ ರಕ್ಷಣೆಯು ಆಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ