ಬೆಂಗಳೂರು : ಮಕ್ಕಳು ಅಳುವಾಗ ಸಮಾಧಾನ ಪಡಿಸುವುದು ಒಂದು ಸಾಧನೆ ಎಂದರೆ ತಪ್ಪಾಗಲಾರದು. ಹೌದು ಮಕ್ಕಳು ಅಳುವುದಕ್ಕೆ ಶುರು ಮಾಡಿದರೆ ಒಮ್ಮೊಮ್ಮೆ ಹೆತ್ತವರ ಕೈ ಕಾಲುಗಳೇ ಓಡುವುದಿಲ್ಲ ಹಾಗಾಗಿ ಬಿಡುತ್ತದೆ. ಸಾಮಾನ್ಯವಾಗಿ ಹಸಿವಿನಿಂದ ಮಕ್ಕಳು ಅಳುತ್ತವೆ ಆಗ ಮಕ್ಕಳಿಗೆ ಎದೆ ಹಾಲನ್ನು ಕುಡಿಸಿ ಸಮಾಧಾನಗೊಳ್ಳುತ್ತವೆ. ಆದರೆ ಮಕ್ಕಳ ಹೊಟ್ಟೆ ತುಂಬಿಯೂ ಕೆಲವು ಸಮಯದಲ್ಲಿ ಅಳುತ್ತಾರೆ. ಅಂತಹ ಸಮಯದಲ್ಲಿ ಮಕ್ಕಳ ಅಳುವನ್ನು ನಿಲ್ಲಿಸಲು ಈ ರೀತಿಯಾಗಿ ಮಾಡಿ.
*ಮಕ್ಕಳು ಅಳುವಾಗ ಯಾವುದೇ ಕಾರಣಕ್ಕೂ ಒಂಟಿಯಾಗಿರಲು ಬಿಡಬೇಡಿ. ಹೀಗೆ ಮಾಡಿದರೆ ಮಕ್ಕಳ ಸೂಕ್ಷ್ಮ ಮನಸ್ಸಿನ ಮೇಲೆ ಒಂಟಿತನದ ತೀವ್ರ ಪರಿಣಾಮ ಬೀರುತ್ತದೆ.
*ಮಕ್ಕಳಿಗೆ ತಾಯಿಯ ಆಸರೆ ಬೇಕೆಂದೆನಿಸಿದಾಗ ಮಕ್ಕಳು ಅಳುವುದಕ್ಕೆ ಶುರು ಮಾಡುತ್ತವೆ. ಸಾಮಾನ್ಯವಾಗಿ ಎಲ್ಲಾ ಮಕ್ಕಳು ಅಳುವುದು ಇದೇ ಕಾರಣಕ್ಕಾಗಿ. ಅದಕ್ಕಾಗಿಯೇ ಹೆಗಲ ಮೇಲೆ ಹಾಕಿಕೊಂಡರೆ ತಟ್ಟನೆ ಅಳುವನ್ನು ನಿಲ್ಲಿಸಿ ಬಿಡುತ್ತವೆ.
*ಮಕ್ಕಳಿಗೆ ಅಮ್ಮನ ಮುದ್ದಿನ ಅವಶ್ಯಕತೆ ಅತಿ ಹೆಚ್ಚು ಇರುತ್ತದೆ. ಮಕ್ಕಳನ್ನು ಮುದ್ದಿಸಿದರೆ ಮಕ್ಕಳ ಮನಸ್ಸು ಉಲ್ಲಾಸಗೊಳ್ಳುತ್ತದೆ. ಮಕ್ಕಳು ಅಳುವಾಗ ಆದಷ್ಟು ಅಪ್ಪಿಕೊಂಡು ಮುದ್ದಿಸಿ. ಆಗ ಮಗುವಿಗೆ, ಅಮ್ಮ ನನ್ನ ಬಳಿಯೇ ಇರುವಳು ಎಂದೆನಿಸಿ ಅಳು ನಿಲ್ಲುಸುತ್ತದೆ.
*ಮಕ್ಕಳಿಗೆ ಎಲ್ಲಾದರೂ ಬಿದ್ದು ನೋವಾಗಿ ಅಳುತ್ತಿದ್ದರೆ. ತಕ್ಷಣ ಮಕ್ಕಳ ಗಮನ ಬೇರೆಡೆ ಹೋಗುವಂತೆ ಮಾಡಿ.. ಅಂದರೆ ಆಟಿಕೆ ಕೊಡುವುದಾಗಲಿ.. ಅಥವಾ ಪ್ರಾಣಿ ಪಕ್ಷಿಗಳನ್ನು ತೋರಿಸಿವುದಾಗಲಿ. ಅಥವಾ ಬೇರೆ ವಿಚಾರದ ಬಗ್ಗೆ ಮಕ್ಕಳ ಮುಂದೆ ಮಾತನಾಡುತ್ತಿದ್ದರೆ. ಮಕ್ಕಳು ಬಿದ್ದ ನೋವು ಮರೆತು ಬೇರೆ ಕಡೆ ಗಮನ ವಹಿಸಿ. ಅಳುವನ್ನು ನಿಲ್ಲಿಸುತ್ತಾರೆ.
*ಮಕ್ಕಳು ಏನೇ ಮಾಡಿದರೂ ಅಳು ನಿಲ್ಲಿಸಲಿಲ್ಲ ಎಂದರೆ ಮಕ್ಕಳಿಗೆ ಯಾವುದೋ ಒಳ ಅಂಗಗಳು ನೋವುತ್ತಿರುತ್ತದೆ ಎಂದರ್ಥ. ಮೇಲಿನ ಅಷ್ಟೂ ಕೆಲಸ ಮಾಡಿದರೂ ಅಳು ನಿಲ್ಲಿಸಲಿಲ್ಲವೆಂದರೆ ಮುನ್ನೆಚ್ಚರಿಕೆ ಗಾಗಿ ಡಾಕ್ಟರ್ ಬಳಿ ಕರೆದುಕೊಂಡು ಹೋಗುವುದು ಒಳ್ಳೆಯದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ