ಬೆಂಗಳೂರು : ಮಕ್ಕಳಿಗೆ ಹಾಲುಣ್ಣಿಸುವ ತಾಯಂದಿರು ತಾವು ತಿನ್ನುವ ಆಹಾರದ ಬಗ್ಗೆ ಜಾಗೃತಿವಹಿಸಬೇಕಾಗುತ್ತದೆ. ಏಕೆಂದರೆ ಅವರು ಸೇವಿಸುವ ಆಹಾರ ಎದೆಹಾಲನ್ನು ಹೆಚ್ಚಿಸುವುದರ ಜೊತೆಗೆ ಕ್ಷೀಣಿಸುವ ಕೆಲಸವನ್ನು ಮಾಡುತ್ತವೆ. ಆದಕಾರಣ ಎದೆಹಾಲುಣಿಸುವ ತಾಯಂದಿರು ಈ ಆಹಾರಗಳನ್ನು ಸೆವಿಸಬಬಹುದು.
ನಿಮ್ಮ ಆಹಾರಗಳಲ್ಲಿ ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ.ಇವುಗಳಲ್ಲಿ ಆಂಟಿಬ್ಯಾಕ್ಟೀರಿಯಲ್ ಹಾಗೂ ಆಂಟಿ ವೈರಲ್ ಪ್ರೊಪ್ರೈಟಿಗಳನ್ನು ಒಳಗೊಂಡಿರುವುದರಿಂದ ಅದು ಅಲರ್ಜಿ ಮತ್ತು ಸೋಂಕುಗಳನ್ನು ಕೊಲ್ಲುತ್ತದೆ. ಹಾಗೇ ಶಿಟಾಕ್ ಅಣಬೆಗಳನ್ನು ಸೇವಿಸಿ. ಸರಿಯಾಗಿ ನೀರನ್ನು ಕುಡಿಯಿರಿ. ಹಾಗೇ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವ ಕ್ಯಾಲ್ಸಿಯಂ, ಕಬ್ಬಿಣ, ಒಮೆಗಾ 3, ಪೊಟ್ಯಾಸಿಯಂಯನ್ನು ಹೆಚ್ಚಾಗಿ ತಿನ್ನಿ. ಟೊಮೆಟೊ, ಹಸಿರು ಸೊಪ್ಪು, ತರಕಾರಿಗಳು, ಕ್ಯಾತೆಟ್, ಸಿಹಿ ಆಲೂಗಡ್ಡೆ, ಬೀನ್ಸ್, ಸಾಲ್ಮನ್, ಚಿಯಾ ಬೀಜಗಳು, ಹಾಲು, ಅವಕಾಡೊ, ಕಲ್ಲಂಗಡಿ ಮತ್ತು ಸಿಟ್ರಿಸ್ ಹಣ್ನುಗಳನ್ನು ಸೇವಿಸಿ.