ಬೆಂಗಳೂರು: ಕೆಲವರಿಗೆ ಸಂಭೋಗದ ಸಂದರ್ಭದಲ್ಲಿ ವೀರ್ಯಾಣು ಹೊರಚೆಲ್ಲದೇ ಇರುವ ಸಮಸ್ಯೆಯಿರುತ್ತದೆ. ಹಾಗಿರುವಾಗ ಪತ್ನಿ ಗರ್ಭಿಣಿಯಾಗುವ ಸಾಧ‍್ಯತೆಯಿದೆಯೇ?
ಗರ್ಭಧಾರಣೆಯಾಗಲು ವೀರ್ಯಾಣುವಿನ ಅಗತ್ಯ ಇದ್ದೇ ಇರುತ್ತದೆ. ಹಾಗಿದ್ದರೂ ಗರ್ಭಧಾರಣೆಯಾಗಿದೆ ಎಂದರೆ ನಿಮಗರಿವಿಲ್ಲದಂತೆಯೇ ವೀರ್ಯಾಣು ಹೊರಚೆಲ್ಲಿರುವ ಸಾಧ‍್ಯತೆಯೂ ಇರುತ್ತದೆ. ವೀರ್ಯಾಣು ಸಮಸ್ಯೆಯಿದ್ದರೂ ಅನಿರೀಕ್ಷಿತವಾಗಿ ಒಂದೇ ಒಂದು ಆರೋಗ್ಯವಂತ ವೀರ್ಯಾಣು ಮಹಿಳೆಯ ಜನನಾಂಗ ಪ್ರವೇಶಿಸಿದರೂ ಗರ್ಭವತಿಯಾಗುವ ಸಾಧ್ಯತೆಯಿರುತ್ತದೆ. ಒಂದು ವೇಳೆ ಈ ಸಮಸ್ಯೆಯಿಂದ ಹೊರಬರಬೇಕಾದರೆ ಅದಕ್ಕೆ ತಕ್ಕ ಚಿಕಿತ್ಸೆ ಪಡೆದುಕೊಳ್ಳಬಹುದು.