ಬೆಂಗಳೂರು: ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತೀರಾ? ಹಾಗಿದ್ದರೆ ನೀವು ಚಿಂತೆ ಮಾಡುವಂತಹ ವರದಿಯನ್ನು ಹೊಸದೊಂದು ಸಂಶೋಧನೆ ಹೊರ ಹಾಕಿದೆ.
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದರಿಂದ ನಿಮ್ಮ ಲೈಂಗಿಕ ಆಸಕ್ತಿ ಕುಗ್ಗುವುದಲ್ಲದೆ, ಫಲವಂತಿಕೆಗೂ ಕುತ್ತು ಎಂದು ಹೊಸದೊಂದು ಅಧ್ಯಯನ ತಿಳಿಸಿದೆ. ದೆಹಲಿಯ ಐವಿಎಫ್ ಮತ್ತು ಬಂಜೆತನ ಸಮಸ್ಯೆಗೆ ಚಿಕಿತ್ಸೆ ನೀಡುವ ಆಸ್ಪತ್ರೆಯ ವೈದ್ಯರು ಇಂತಹದ್ದೊಂದು ಅಂಶ ಹೊರಹಾಕಿದ್ದಾರೆ.
ಒಬ್ಬ ಆರೋಗ್ಯವಂತಹ ಮನುಷ್ಯ ಪ್ರತೀ ರಾತ್ರಿ ಏಳರಿಂದ ಎಂಟು ಗಂಟೆ ಕಾಲ ನಿದ್ರಿಸಬೇಕು. ಆದರೆ ಇಂದಿನ ಉದ್ಯೋಗದ ರೀತಿಯೇ ಹಾಗಿದೆ. ರಾತ್ರಿ ನಿದ್ರೆ ಸರಿಯಾಗಿ ಆಗುವುದಿಲ್ಲ. ಇದರಿಂದ ಅವರ ದೈನಂದಿನ ಚಟುವಟಿಕೆಗಳು ವ್ಯತ್ಯಾಸವಾಗುತ್ತದೆ.
ಇದೆಲ್ಲದರ ಪರಿಣಾಮ ಮನುಷ್ಯನ ಸೆಕ್ಸ್ ಬಯಕೆಗಳನ್ನು ನಿಯಂತ್ರಿಸುವ ಹಾರ್ಮೋನ್ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಪುರುಷರಲ್ಲಿ ಲೈಂಗಿಕ ಬಯಕೆಗಳು ಕಡಿಮೆಯಾಗುತ್ತದೆ ಮತ್ತು ಪುರುಷರಲ್ಲಿ ಬಂಜೆತನ ಬರಬಹುದು ಎಂದು ವೈದ್ಯರು ತಿಳಿಸಿದ್ದಾರೆ.