ಬೆಂಗಳೂರು: ಕೆಲವರಿಗೆ ಊಟ ಮಾಡಿದ ಮೇಲೆ ಒಂದೊಂದು ಅಭ್ಯಾಸವಿರುತ್ತದೆ. ಆದರೆ ಇಂತಹ ಒಂದೊಂದು ಅಭ್ಯಾಸಗಳು ಕೆಲವೊಮ್ಮೆ ಎಂತಹಾ ದುರಂತ ತರಬಹುದು ಎಂಬ ಅರಿವು ನಮಗಿರುವುದಿಲ್ಲ. ಅದಕ್ಕೆ ಒಂದು ಉದಾಹರಣೆ ಇಲ್ಲಿದೆ ನೋಡಿ.
ಊಟವಾದ ಮೇಲೆ ಧೂಮಪಾನ ಮಾಡದಿದ್ದರೆ ಕೆಲವರಿಗೆ ಏನೋ ಕಳೆದುಕೊಂಡಂತೆ. ಆದರೆ ಈ ಅಭ್ಯಾಸ ನಮ್ಮ ಪ್ರಾಣಕ್ಕೆ ಕುತ್ತಾಗಬಹುದು. ಅಂದರೆ ಊಟವಾದ ತಕ್ಷಣ ಧೂಮಪಾನ ಮಾಡುವುದರಿಂದ ಕ್ಯಾನ್ಸರ್ ನಂತಹ ಮಾರಣಾಂತಿಕ ರೋಗ ಬರಬಹುದು. ಅದು ಹೇಗೆ? ನೋಡೋಣ.
ಊಟವಾದ ತಕ್ಷಣ ಒಂದು ಸಿಗರೇಟು ಸೇವಿಸುವುದು ಏಕಕಾಲಕ್ಕೆ 10 ಸಿಗರೇಟು ಸೇವಿಸಿದ್ದಕ್ಕೆ ಸಮ ಎಂದು ತಜ್ಞರು ಹೇಳುತ್ತಾರೆ. ಸಿಗರೇಟು ಸೇವನೆ ನಿಮ್ಮ ಪುರುಷತ್ವಕ್ಕೂ ಕುತ್ತು ತರಬಹುದು. ಊಟವಾದ ಮೇಲೆ ನಮ್ಮ ದೇಹದಲ್ಲಿ ಜೀರ್ಣಪ್ರಕ್ರಿಯೆ ನಡೆಯುತ್ತಿರುತ್ತದೆ.
ಈ ಸಂದರ್ಭದಲ್ಲಿ ನಿಕೋಟಿನ್ ಅಂಶ ಸೇವಿಸಿದರೆ, ಅದು ಬೇಗನೇ ರಕ್ತಕ್ಕೆ ಸೇರಿಕೊಳ್ಳುತ್ತದೆ. ಇದರಿಂದ ಕರುಳು, ಶ್ವಾಸಕೋಶದ ಕ್ಯಾನ್ಸರ್ ನಂತಹ ಅಪಾಯ ಬರುವ ಸಾಧ್ಯತೆ ಹೆಚ್ಚು ಎಂದು ವಿಜ್ಞಾನಿಗಳೇ ಹೇಳುತ್ತಾರೆ. ಹಾಗಾಗಿ ಊಟವಾದ ಮೇಲೆ ಸಿಗರೇಟು ಸೇವಿಸುವವರು ಅರೆಕ್ಷಣ ಯೋಚಿಸುವುದು ಒಳಿತು.