ಬೆಂಗಳೂರು : ಸನಾತನ ಕಾಲದಿಂದಲೂ ಉಪ್ಪಿಗೆ ಹೆಚ್ಚು ಮಹತ್ವವಿದೆ. ಆಯುರ್ವೇದದಲ್ಲಿ ಕೂಡ ಉಪ್ಪನ್ನು ಚಿಕಿತ್ಸೆಗೆ ಬಳಸಲಾಗುತ್ತದೆ. ಉಪ್ಪನ್ನು ಬಳಸಿ ಹಲವು ಕಾಯಿಲೆಗಳನ್ನು ನಿವಾರಿಸಬಹುದು. ಅದರಲ್ಲಿ ಮಲಬದ್ಧತೆ ಕೂಡ ಒಂದು. ಹಾಗಾಗಿ ಉಪ್ಪನ್ನು ಬಳಸಿ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯೋಣ.
ನಮ್ಮ ಕೆಟ್ಟ ಆಹಾರದಲ್ಲಿ ಪದ್ಧತಿಯಿಂದ ಮಲಬದ್ಧತೆ ಸಮಸ್ಯೆ ಕಾಡುತ್ತದೆ. ಕಲ್ಲುಪ್ಪು ಮೆಗ್ನಿಶಿಯಂನ್ನು ಹೊಂದಿರುತ್ತದೆ. ಇದು ಕರುಳಿನ ಚಟುವಟಿಕೆಯನ್ನು ಉತ್ತಮಗೊಳಿಸುತ್ತದೆ.
ಹಾಗಾಗಿ ತಜ್ಞರು ಹೇಳುವಂತೆ ಒಂದು ಲೋಟ ನೀರಿಗೆ ರುಚಿಗೆ ತಕಷ್ಟು ಕಲ್ಲುಪ್ಪನ್ನು ಸೇರಿಸಿ ಮಿಕ್ಸ್ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದರಿಂದ ಮಲಬದ್ಧತೆ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ. ಹಾಗೇ ಅನಿಲವನ್ನು ನಿವಾರಿಸುತ್ತದೆ.