ಬೆಂಗಳೂರು : ಬೀಟ್ ರೋಟ್ ನ್ನು ಅಡುಗೆಗೆ ಬಳಸುತ್ತಾರೆ. ಅಷ್ಟು ಮಾತ್ರವಲ್ಲ ಚಳಿಗಾಲದಲ್ಲಿ ಸೌಂದರ್ಯ ವೃದ್ಧಿಸಿಕೊಳ್ಳಲು ಕೂಡ ಬೀಟ್ ರೋಟ್ ನ್ನು ಬಳಸಬಹುದು. ಇದರಿಂದ ಸುಂದರವಾದ ತ್ವಚೆಯನ್ನು ಪಡೆಯಬಹುದು. ಹಾಗಾದ್ರೆ ಅದನ್ನು ಬಳಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.
12 ಚಮಚ ಗ್ರಾಂ ಹಿಟ್ಟು, 1 ಚಿಟಿಕೆ ಅರಶಿನ ಪುಡಿ, ಸ್ವಲ್ಪ ಕೆನೆ ಮಿಕ್ಸ್ ಮಾಡಿ ಅದಕ್ಕೆ ಬೀಟ್ ರೋಟ್ ರಸವನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ವಾಶ್ ಮಾಡಿ ಇದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.