ಬೆಂಗಳೂರು: ವಯಸ್ಸು ಮೂವತ್ತು ದಾಟಿದ ಮೇಲೆ ಪುರುಷರು ಸಂಸಾರ ಜಂಜಾಟದಲ್ಲಿ ಹೈರಾಣಾಗಿರುತ್ತಾರೆ. ಈ ವಯಸ್ಸಿನಲ್ಲಿ ಮದುವೆ, ಮಕ್ಕಳು ಎಂದು ಜವಾಬ್ಧಾರಿಗಳು ಹೆಚ್ಚಾಗುತ್ತವೆ.
ಹೀಗಾಗಿಯೇ ಈ ವಯಸ್ಸಿನಲ್ಲಿ ಪುರುಷರಿಗೆ ಲೈಂಗಿಕ ನಿರಾಸಕ್ತಿ ಅಥವಾ ಉದ್ರೇಕದ ಸಮಸ್ಯೆಗಳು ಕಂಡುಬರುತ್ತವೆ. ಹೀಗಂತ ಬ್ರಿಟನ್ ನ ಅಧ್ಯಯನಕಾರರು ಹೇಳಿದ್ದಾರೆ.
ಮೂವತ್ತು ದಾಟಿದ ಪುರುಷರ ಮೇಲೆ ಅಧ್ಯಯನ ನಡೆಸಿರುವ ಅಧ್ಯಯನಕಾರರು ಈ ವಯಸ್ಸಿನಲ್ಲಿ ಪುರುಷರಿಗೆ ಲೈಂಗಿಕ ನಿರಾಸಕ್ತಿಯಂತಹ ಹಲವು ಸಮಸ್ಯೆಗಳು ಕಂಡುಬರುತ್ತವೆ ಎಂದು ಕಂಡುಕೊಂಡಿದ್ದಾರೆ. ಇದಕ್ಕೆ ಅವರ ಕೆಲವು ದುಶ್ಚಟಗಳೂ ಕಾರಣವಾಗುತ್ತವೆ ಎನ್ನುವುದು ಅಧ್ಯಯನಕಾರರ ಅಭಿಪ್ರಾಯ. ಹಾಗಾಗಿ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಂಡು ಜೀವನದಲ್ಲಿ ಒತ್ತಡವನ್ನು ಆದಷ್ಟು ದೂರ ಮಾಡುವುದು ಒಳ್ಳೆಯದು ಎಂದಿದ್ದಾರೆ.