Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇದರಿಂದ ಮಸಾಜ್ ಮಾಡಿದರೆ ಪಾದಗಳು ಬಿರುಕು ಕಡಿಮೆಯಾಗುತ್ತದೆ

ಇದರಿಂದ ಮಸಾಜ್ ಮಾಡಿದರೆ ಪಾದಗಳು ಬಿರುಕು ಕಡಿಮೆಯಾಗುತ್ತದೆ
ಬೆಂಗಳೂರು , ಶುಕ್ರವಾರ, 28 ಜೂನ್ 2019 (08:37 IST)
ಬೆಂಗಳೂರು : ಪಾದಗಳು ಒಣಗಿದಾಗ ಬಿರುಕು ಬಿಡುತ್ತದೆ.ಇದರಿಂದ ರಕ್ತ ಬರುತ್ತದೆ ಜೊತೆಗೆ ತುಂಬಾ ನೋವು ಕೂಡ ಇರುತ್ತದೆ. ಇದು ಪಾದಗಳ ಅಂದವನ್ನು ಕೆಡಿಸುತ್ತದೆ. ಈ ಪಾದಗಳಿಗೆ ಮಸಾಜ್ ಮಾಡುವುದರಿಂದ ಪಾದಗಳು ನಯವಾಗಿ ಬಿರುಕು ಬಿಡುವುದು ಕಡಿಮೆಯಾಗುತ್ತದೆ.




*ಒಂದು ಪಾತ್ರೆಯಲ್ಲಿ ಬಿಸಿ ನೀರು ತೆಗೆದುಕೊಂಡು, ಕಾಲನ್ನು 20 ನಿಮಷಗಳ ಕಾಲ ನೀರಿನಲ್ಲಿರಿಸಿ. ನಂತರ ಕಾಲುಗಳನ್ನು ಹೊರತೆಗೆದು ಒಣಗಿಸಿಕೊಳ್ಳಿ. ಬಳಿಕ  ಪಾದಗಳಿಗೆ ಜೇನಿನಿಂದ 15 ನಿಮಿಷ ಮಸಾಜ್ ಮಾಡಿ. ನಂತರ ನೀರಿನಲ್ಲಿ ಕಾಲುಗಳನ್ನು ತೊಳೆಯಿರಿ. ಇದರಿಂದ ಒರಟಾದ ಪಾದ ನಯವಾಗಿ ಬಿರುಕು ಬಿಡುವುದು ಕಡಿಮೆಯಾಗುತ್ತದೆ.


* ಪ್ರತೀ ರಾತ್ರಿ ಮಲಗುವ ಮುನ್ನ, ನಿಮ್ಮ ಹಿಮ್ಮಡಿಗೆ ವ್ಯಾಸಲಿನ್ ಅನ್ನು ಸವರಿಕೊಳ್ಳಿ ಈ ಪೆಟ್ರೋಲಿಯಮ್ ಜೆಲ್ಲಿ ತ್ವಚೆಯನ್ನು ಮೃದುವಾಗಿಸುವುದರ ಜೊತೆಗೆ ಕಡಿಮೆ ಸಮಯದಲ್ಲೇ ಬಿರುಕಿನ ಸಮಸ್ಯೆಯನ್ನು ದೂರಮಾಡುತ್ತದೆ.


* ತ್ವಚೆಯ ಮೇಲೆ ಪರಿಣಾಮಕಾರಿಯಾಗಿ ಆಲೀವ್ ಆಯಿಲ್ ಕೆಲಸ ಮಾಡುತ್ತದೆ. ಸ್ನಾನದ ನಂತರ, ಬೆಚ್ಚಗಿನ ಆಲೀವ್ ಆಯಿಲ್ ಬಳಸಿಕೊಂಡು ಹಿಮ್ಮಡಿಯನ್ನು ಮಸಾಜ್ ಮಾಡಿಕೊಳ್ಳಿ. ಪಾದ ಮತ್ತು ಹಿಮ್ಮಡಿ ಈ ಎಣ್ಣೆಯನ್ನು ಹೀರಲು ಬಿಡಿ. ನಂತರ ಸಾಕ್ಸ್‎ನಿಂದ ಪಾದವನ್ನು ಮುಚ್ಚಿ ಮರುದಿನ ಬೆಳಗ್ಗೆ ಕಾಲುಗಳನ್ನು ತೊಳೆದುಕೊಳ್ಳಿ.


* ನಿಮ್ಮ ಒಣ ತ್ವಚೆಗೆ ತೆಂಗಿನೆಣ್ಣೆ ಉತ್ತಮವಾದುದು. ಬಿಸಿಯಾದ ತೆಂಗಿನೆಣ್ಣೆಯನ್ನು ಹಿಮ್ಮಡಿಗೆ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ ನಂತರ ಬೆರಳು ತುದಿಯವರೆಗೆ ಚೆನ್ನಾಗಿ ನೀವಿಕೊಳ್ಳಿ ಕನಿಷ್ಟ ಪಕ್ಷ 15 ನಿಮಿಷಗಳು ಕಾಲನ್ನು ಮಸಾಜ್ ಮಾಡಿ ನಂತರವಷ್ಟೇ ಮಲಗಲು ಹೋಗಿ.



 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿ ಮಾಡುವೆ ಎಂದ ಆಕೆ ಹೀಗಾ ಮಾಡೋದು?