Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಾರಿಗೆ ಸಚಿವ ಡಿಸಿ ತಮ್ಮಣ್ಣನ ವಿರುದ್ಧ ಸರ್ಕಾರಿ ಸಾರಿಗೆ ನೌಕರರಿಂದ ಇಂದು ಪ್ರತಿಭಟನೆ

ಸಾರಿಗೆ ಸಚಿವ ಡಿಸಿ ತಮ್ಮಣ್ಣನ ವಿರುದ್ಧ ಸರ್ಕಾರಿ ಸಾರಿಗೆ ನೌಕರರಿಂದ ಇಂದು ಪ್ರತಿಭಟನೆ
ಬೆಂಗಳೂರು , ಗುರುವಾರ, 27 ಜೂನ್ 2019 (10:14 IST)
ಬೆಂಗಳೂರು : ಹಲವವು ಬೇಡಿಕೆಗಳನ್ನು ಈಡೇರಿಸುವಂತೆ ಹಾಗೂ ಸಾರಿಗೆ ಸಚಿವ ಡಿಸಿ ತಮ್ಮಣ್ಣರವರ  ವಿರುದ್ಧ ಸರ್ಕಾರಿ ಸಾರಿಗೆ ನೌಕರರು ಬೆಂಗಳೂರು ಚಲೋಗೆ ಕರೆಕೊಟ್ಟಿದ್ದು,  ಇಂದು ಬೀದಿಗಿಳಿದು ಪ್ರತಿಭಟನೆ ನಡೆಸಲಿದ್ದಾರೆ.



ಈ ಹಿನ್ನಲೆಯಲ್ಲಿ ಇಂದು ಸಾರಿಗೆ ನಿಗಮದ ನೌಕರರು ಕರ್ತವ್ಯಕ್ಕೆ ಹಾಜರಾಗದ ಕಾರಣ  ಬಿಎಂಟಿಸಿ, ಕೆಎಸ್‍ಆರ್ ಟಿಸಿ ಸೇರಿದಂತೆ ಸರ್ಕಾರಿ ಸಾರಿಗೆ ವ್ಯವಸ್ಥೆಯ ಸೇವೆಯಲ್ಲಿ ಕೊಂಚ ವ್ಯತ್ಯಯವಾಗುವ ಸಾಧ್ಯತೆ ಇದೆ. ಎನ್ನಲಾಗಿದೆ. ಇಂದು 11 ಗಂಟೆಗೆ, ಲಾಲ್‍ಬಾಗ್‍ ನಿಂದ ಶಾಂತಿನಗರದ ಕೆಎಸ್‍ಆರ್ ಟಿಸಿ ಮುಖ್ಯ ಕಚೇರಿಯವರೆಗೆ ರ್ಯಾಲಿ ನಡೆಯಲಿದೆ.  ರಾಜ್ಯಾದ್ಯಾಂತ ಸಾರಿಗೆ ನೌಕರರು ಹಾಗೂ ಬಿಎಂಟಿಸಿ ಚಾಲಕ ನಿರ್ವಾಹಕರು ಈ ರ್ಯಾಲಿ ಯಲ್ಲಿ ಪಾಲ್ಗೊಳ್ಳಲಿದ್ದಾರೆ.

 

ಸಾರಿಗೆ ನೌಕರರ ವೇತನವನ್ನು ಸರ್ಕಾರವೇ ಭರಿಸಬೇಕು, ನಿಗಮಗಳಿಗೆ ಮೋಟಾರ್ ವೆಹಿಕಲ್ ತೆರಿಗೆ ರಿಯಾಯಿತಿ ನೀಡಬೇಕು, ಖಾಸಗಿ ಬಸ್ ಮಾಲೀಕರ ಕಾನೂನು ಬಾಹಿರ ಚಟುವಟಿಕೆ ನಿಲ್ಲಿಸುವಂತೆ ಮುಂತಾದ ಬೇಡಿಕೆಗಳಿಗೆ ಆಗ್ರಹಿಸಿ ಸರ್ಕಾರಿ ಸಾರಿಗೆ ನೌಕರರು ರ್ಯಾಲಿ ನಡೆಸಲಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಉಜಳಂಬ ಗ್ರಾಮದಲ್ಲಿ ಇಂದು ಸಿಎಂ 3ನೇ ಗ್ರಾಮವಾಸ್ತವ್ಯ