ಬೆಂಗಳೂರು : ಚಳಿಗಾಲದಲ್ಲಿ ಹೆಚ್ಚಾಗಿ ತುಟಿ ಕೋಮಲತೆಯನ್ನು ಕಳೆದುಕೊಂಡು ಒಡೆಯುತ್ತದೆ. ಇದರಿಂದ ತುಟಿ ಉರಿಯುವುದು ಮಾತ್ರವಲ್ಲ ಕೆಲವೊಮ್ಮೆ ರಕ್ತ ಕೂಡ ಬರುತ್ತದೆ. ಇದನ್ನು ಮನೆಮದ್ದಿನಿಂದ ಬಹಳ ಬೇಗ ನಿವಾರಿಸಿಕೊಳ್ಳಬಹುದು.
ಗುಲಾಬಿ ಹೂವಿನ ದಳದ ಪೇಸ್ಟ್ 1 ಟೀ ಚಮಚ, ಹಾಲಿನ ಕೆನೆ 1ಟೀ ಚಮಚ, ಜೇನುತುಪ್ಪ 1 ಟೀ ಚಮಚ ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ತುಟಿಗೆ ಹಚ್ಚಿಕೊಳ್ಳಿ. ಅರ್ಧಗಂಟೆ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಇದನ್ನು ದಿನದಲ್ಲಿ 8 ಬಾರಿ ಮಾಡಬೇಕು. ಹೀಗೆ ಮಾಡಿದರೆ 2 ದಿನದಲ್ಲಿ ಒಡೆದ ತುಟಿ ಸರಿಯಾಗುತ್ತದೆ. ಹಾಗೇ ತುಟಿಗೆ ಕಲರ್ ಕೂಡ ಬರುತ್ತದೆ.
ಶುದ್ಧ ಹಸುವಿನ ತುಪ್ಪ 1 ಟೀ ಚಮಚ, ಹಾಲಿನ ಕೆನೆ 1ಟೀ ಚಮಚ, ಜೇನುತುಪ್ಪ 1 ಟೀ ಚಮಚ ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ತುಟಿಗೆ ಹಚ್ಚಿಕೊಂಡು 5-10 ನಿಮಿಷ ಚೆನ್ನಾಗಿ ಮಸಾಜ್ ಮಾಡಿ. ಅರ್ಧಗಂಟೆ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಇದನ್ನು ಕೂಡ ದಿನದಲ್ಲಿ 8 ಬಾರಿ ಮಾಡಬೇಕು. ಹೀಗೆ ಮಾಡಿದರೆ 2 ದಿನದಲ್ಲಿ ಒಡೆದ ತುಟಿ ಸರಿಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.