ಬೆಂಗಳೂರು : ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಸಿಸಿಬಿಯ ಒಸಿಡಬ್ಲ್ಯು ವಿಂಗ್ ನ ಇನ್ಸ್ ಪೆಕ್ಟರ್ ಹಾಗೂ ಮುಖ್ಯ ಪೇದೆಯನ್ನು ಅಮಾನತು ಮಾಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.
AIMMS ಚಿಟ್ ಫಂಡ್ ಕಂಪೆನಿಯಿಂದ ಜನರಿಗೆ ಮೋಸವಾದ ಹಿನ್ನಲೆಯಲ್ಲಿ ಸಿಸಿಬಿಯ ಒಸಿಡಬ್ಲ್ಯು ವಿಂಗ್ ನ ಇನ್ಸ್ ಪೆಕ್ಟರ್ ಪ್ರಕಾಶ್ ಹಾಗೂ ಮುಖ್ಯ ಪೇದೆ ಸತೀಶ್ ವಿಚಾರಣೆ ನೆಪದಲ್ಲಿ AIMMS ಚಿಟ್ ಫಂಡ್ ಕಂಪೆನಿ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಇಬ್ಬರು ಒಂದು ಕೋಟಿಗೆ ಬೇಡಿಕೆ ಇಟ್ಟು 35 ಲಕ್ಷ ರೂ.ಪಡೆದಿದ್ದು, ಈ ಬಗ್ಗೆ ಡಿಸಿಪಿ ಗಿರೀಶ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ಈ ವರದಿ ಆಧರಿಸಿ ಇನ್ಸ್ ಪೆಕ್ಟರ್ ಹಾಗೂ ಪೇದೆಯನ್ನ ಅಮಾನತು ಮಾಡುವಂತೆ ಟಿ.ಸುನೀಲ್ ಕುಮಾರ್ ರಿಂದ ಆದೇಶಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.