ಬೆಂಗಳೂರು: ಶರೀರದಲ್ಲಿ ಕೊಬ್ಬಿನಂಶ ಎಷ್ಟಿರಬೇಕು? ಆಗ ತಾನೇ ಹುಟ್ಟಿದ ಮಗುವಿನಷ್ಟು ಇದ್ದರೆ ಸಾಕಂತೆ. ಇಷ್ಟಿದ್ದರೆ ಹೃದಯಾಘಾತಕ್ಕೊಳಗಾಗುವ ಅಪಾಯ ತಪ್ಪಿಸಬಹುದು ಎಂದು ನೂತನ ವರದಿ ತಿಳಿಸಿದೆ.
ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚು ಕೊಬ್ಬು ತುಂಬಿಕೊಂಡಿದ್ದರೆ, ಹೃದಯ ಖಾಯಿಲೆ, ಪಾರ್ಶ್ವವಾಯು ಸಂಭವ ಹೆಚ್ಚು. ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಿದರೆ ಇದೆಲ್ಲದರಿಂದ ಮುಕ್ತಿ ಪಡೆಯಬಹುದು ಎನ್ನುತ್ತಿದ್ದಾರೆ ವಿಜ್ಞಾನಿಗಳು.
100 ಎಂಜಿ/ಡೆಸಿ ಲೀಟರ್ ಗಿಂತ ಕಡಿಮೆ ಕೊಲೆಸ್ಟ್ರಾಲ್ ಅಂಶ ಇದ್ದರೆ ಸಾಕು. ಯಾವುದೇ ಗಂಭೀರ ಖಾಯಿಲೆಯಾಗುವ ಅಪಾಯವಿಲ್ಲ ಎನ್ನಲಾಗಿದೆ. ನಾವು ಸೇವಿಸುವ ಆಹಾರ, ಜೀವನ ಕ್ರಮದಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣಕ್ಕೆ ತರಬಹುದು ಎಂದು ಸಂಶೋಧಕರು ಹೇಳುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ