ಬೆಂಗಳೂರು: ರಕ್ತದೊತ್ತಡಕ್ಕೆ ತೆಗೆದುಕೊಳ್ಳುವ ಕೆಲವು ಮಾತ್ರೆಗಳನ್ನು ಸೇವಿಸಿದರೆ ಕ್ಯಾನ್ಸರ್ ವೈರಾಣುಗಳು ಹರಡೋದಿಲ್ಲ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ರಕ್ತದೊತ್ತಡಕ್ಕೆ ನೀಡುವ ಚಿಕಿತ್ಸೆಯಿಂದ ಇಂತಹದ್ದೊಂದು ಉಪಯೋಗವಿದೆ ಎಂದು ಇದೇ ಮೊದಲ ಬಾರಿಗೆ ಕಂಡುಕೊಳ್ಳಲಾಗಿದೆ. ಫಿನ್ ಲ್ಯಾಂಡ್ ನ ಸಂಶೋಧಕರ ತಂಡ ಈಗಾಗಲೇ ಇರುವ ಔಷಧಿಗಳ ಮೇಲೆ ಪ್ರಯೋಗ ನಡೆಸಿ ಈ ಫಲಿತಾಂಶ ಕಂಡುಕೊಂಡಿದೆ. ಅವರ ಪ್ರಕಾರ ಈ ಔಷಧಗಳಿಂದ ಸ್ತನ ಕ್ಯಾನ್ಸರ್ ಮತ್ತು ಮೇದೋಜೀರಕ ಗ್ರಂಥಿಗೆ ಬರುವ ಕ್ಯಾನ್ಸರ್ ಅಪಾಯ ಕಡಿಮೆಯಂತೆ.
ಕ್ಯಾನ್ಸರ್ ಕಣಗಳ ಚಲನೆ ಬಗ್ಗೆ ಅಧ್ಯಯನ ನಡೆಸುವಾಗ ಸಂಶೋಧಕರಿಗೆ ಇಂತಹದ್ದೊಂದು ವಿಶೇಷ ಸಂಗತಿ ಬೆಳಕಿಗೆ ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ