Webdunia - Bharat's app for daily news and videos

Install App

ಪ್ರೇಮಿಗಳ ದಿನದ ವಿಶೇಷತೆ ಏನು ತಿಳಿಯಿರಿ

Webdunia
ಗುರುವಾರ, 3 ಫೆಬ್ರವರಿ 2022 (12:50 IST)
ಫೆಬ್ರವರಿ ತಿಂಗಳು ಬಂತೆಂದರೆ ನೆನಪಾಗುವುದೇ ವ್ಯಾಲೆಂಟೈನ್ಸ್ ಡೇ ಮತ್ತು ಅದರ ಹಿಂದಿದ 7 ದಿನಗಳು.
 
ಅದನ್ನು ವ್ಯಾಲೆಂಟೈನ್ಸ್ ವೀಕ್ ಎಂದು ಕರೆಯುತ್ತಾರೆ. ಜಗತ್ತಿನಾದ್ಯಂತ ಈ ವ್ಯಾಲೆಂಟೈನ್ಸ್ ವಾರವನ್ನು ಆಚರಣೆ ಮಾಡಲಾಗುತ್ತದೆ. ಪ್ರೇಮ‌ ಕುರುಡು, ಪ್ರೇಮಕ್ಕೆ ಸಾವಿಲ್ಲ, ಪ್ರೇಮ ಅಮರ, ಪ್ರೇಮಾಂಕುರ ಹೇಗಾಗುತ್ತದೋ ಗೊತ್ತಿಲ್ಲ.

ಹೀಗೆ ಪ್ರೇಮದ ಬಗೆಗಿನ ವ್ಯಾಖ್ಯಾನ ಮುಂದುವರಿಯುತ್ತದೆ. ಪ್ರೇಮ ಅಮರವಾದರೂ ಆಚರಣೆಗಾಗಿ ಒಂದು ವಾರವನ್ನೇ ಮೀಸಲಾಗಿರಿಸಲಾಗಿದೆ. ಫೆಬ್ರವರಿ 7ರಿಂದ ಆರಂಭವಾಗಿ ಫೆಬ್ರವರಿ 14ರಂದು ಕೊನೆಗೊಳ್ಳುತ್ತದೆ. ಈ ಅವಧಿಯಲ್ಲಿ ಗಿಫ್ಟ್‌ಗಳ ವಿನಿಮಯವಾಗುತ್ತದೆ.

ಭರವಸೆಗಳ ಸುರಿಮಳೆಯಾಗುತ್ತದೆ. ಅಷ್ಟೇ ಅಲ್ಲ, ಹೊಸ ಹೊಸ ಪ್ರೇಮಾಂಕುರವಾಗಬಹುದು. ಪ್ರೇಮಿಗಳ‌ ಬಂಧ ಗಟ್ಟಿಯಾಗಬಹುದು. ಪ್ರೇಮ ಗಟ್ಟಿಯಾಗಿ ಮದುವೆಯಾಗಬಹುದು.

ಒಂದೇ ಮಾತಲ್ಲಿ ಹೇಳುವುದಾದರೆ ಈ ವಾರವನ್ನು ‘ಪ್ರೇಮೋತ್ಸವ’ ಎನ್ನಬಹುದು. ಪ್ರೇಮಿಗಳ ವಾರದ ಮೊದಲ ದಿನವು ಗುಲಾಬಿ ದಿನದಿಂದ ಪ್ರಾರಂಭವಾಗುತ್ತದೆ.

ರೋಸ್ ಡೇ

ಫೆ.7 ರಂದು ಪ್ರೇಮಿಗಳ ವಾರದ ಮೊದಲ ದಿನ. ಇದನ್ನು ರೋಸ್ ಡೇ ಎಂದು ಆಚರಿಸಲಾಗುತ್ತದೆ. ಪ್ರೀತಿಯ ಸಂಕೇತವಾದ ಕೆಂಗುಲಾಬಿ ಹಿಡಿದು ಪ್ರೇಮಿಯ ಎದುರು ನಿಲ್ಲುವ ಈ ದಿನ ಪ್ರೇಮಿಗಳ ಪಾಲಿನ ಪರೀಕ್ಷೆಯ ಮೊದಲ ದಿನ ಎನ್ನಬಹುದು.

ಪ್ರಪೋಸ್ ಡೇ

ಪ್ರೇಮಿಗಳ ವಾರದ ಎರಡನೇ ದಿನ ಫೆ. 8ರಂದು ಪ್ರಪೋಸ್ ಡೇ. ಗುಲಾಬಿ ನೀಡಿದ ಬಳಿಕ ಮನದನ್ನೆಯ ಎದುರು ಹೃದಯದ ಭಾವನೆಗಳನ್ನು ವ್ಯಕ್ತಪಡಿಸಿ ಪ್ರೇಮ ನಿವೇದನೆ ಮಾಡಿಕೊಳ್ಳುವ ದಿನ.  ಈ ದಿನವನ್ನು ಅತ್ಯಂತ ರೊಮ್ಯಾಂಟಿಕ್ ದಿನವೆಂದೇ ಕರೆಯುತ್ತಾರೆ.

ಚಾಕೋಲೇಟ್ ಡೇ

ಫೆ.9ರಂದು ಚಾಕೋಲೇಟ್ ಡೇ ಎಂದು ಆಚರಿಸಲಾಗುತ್ತದೆ. ಪ್ರೀತಿಯ ಪಯಣಕ್ಕೆ ಸಿಹಿ ಸೇರಿಸುವ ದಿನ ಈ ಚಾಕೋಲೇಟ್ ಡೇ. ಈ ದಿನ ನಿಮ್ಮ ಮನದರಸಿಗೆ ಚಾಕೋಲೇಟ್ ನೀಡಿ ಸಂಬಂಧದ ಸಿಹಿಯನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳಬಹುದು.

ಟೆಡ್ಡಿ ಡೇ

ಪ್ರೇಮಿಗಳ ಪಾಲಿನ 4ನೇ ಅತಿ ಮುಖ್ಯ ದಿನ ಫೆ. 10. ಈ ದಿನವನ್ನು ಟೆಡ್ಡಿ ಡೇ ಎಂದು ಸೆಲೆಬ್ರೇಟ್ ಮಾಡಲಾಗುತ್ತದೆ. ಟೆಡ್ಡಿ ಬೇರ್ ಗೊಂಬೆಗಳು  ಕ್ಯೂಟ್ ಲುಕ್ ಹೊಂದಿರುತ್ತವೆ. ಹೆಣ್ಣುಮಕ್ಕಳು ಹೆಚ್ಚು ಇಷ್ಟಪಡುವ ಈ ಟೆಡ್ಡಿ ಗೊಂಬೆಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ವ್ಯಾಲೆಂಟೈನ್ಸ್ ವಾರದ ಮತ್ತೊಂದು ವಿಶೇಷ ದಿನವನ್ನು ಆಚರಿಸಲಾಗುತ್ತದೆ.

ಪ್ರಾಮಿಸ್ ಡೇ

ಪ್ರತೀ ಪ್ರೇಮಿಗಳೂ ಜೀವನ ಪರ್ಯಂತ ಜತೆಯಾಗಿ ಬಾಳಬೇಕು ಎನ್ನುವ ಬಯಕೆಯನ್ನು ಹೊಂದಿರುತ್ತಾರೆ. ವ್ಯಾಲೆಂಟೈನ್ಸ್ ವೀಕ್ನ 5 ನೇ ದಿನವಾದ ಪ್ರಾಮಿಸ್ ಡೇ ಅಂತಹ ಪ್ರಾಮಿಸ್ಗಳನ್ನು, ಪರಸ್ಪರ  ಒಟ್ಟಿಗೆ ಇರುವ ನಿರ್ಧಾರವನ್ನು ಕೈಗೊಳ್ಳುವ ದಿನ. ಪೇ. 11ರಂದು ಈ ದಿನವನ್ನು ಆಚರಿಸಲಾಗುತ್ತದೆ.

ಹಗ್ ಡೇ

ಒಂದು ಪ್ರೀತಿಯ ಅಪ್ಪುಗೆ ಸಾವಿರ ನೋವುಗಳನ್ನು ನಿವಾರಿಸಬಲ್ಲದು. ಅದು ಪ್ರೇಮಿಯಿಂದ ಸಿಕ್ಕರೆ ಮತ್ತಷ್ಟು ಖುಷಿಯಾಗುವುದಂತೂ ಸುಳ್ಳಲ್ಲ. ಹೀಗಾಗಿ ವ್ಯಾಲೆಂಟೈನ್ಸ್ ವಾರದಲ್ಲಿ ಹಗ್ ಡೇಯನ್ನು ಆಚರಿಸಲಾಗುತ್ತದೆ. ಫೆ. 12 ರಂದು ಹಗ್ ಡೇ ಆಚರಿಸಲಾಗುತ್ತದೆ.

ಕಿಸ್ ಡೇ

ವ್ಯಾಲೆಂಟೈನ್ಸ್ ವಾರದ ಏಳನೇ ದಿನ ಕಿಸ್ ಡೇ. ಒಂದು ಮುತ್ತು ಪ್ರೀತಿಯ ಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ. ಹೀಗಾಗಿ ಈ ದಿನವನ್ನು ಪ್ರೀತಿಯ ಹೃದಯದೊಡೆಯನಿಗೆ/ಹೃದಯದೊಡತಿಗೆ ಮುತ್ತನ್ನು ನೀಡಿ ಪ್ರೀತಿಯನ್ನು ವ್ಯಕ್ತಪಡಿಸಬಹುದಾಗಿದೆ.

ವ್ಯಾಲೆಂಟೈನ್ಸ್ ಡೇ

ವ್ಯಾಲೆಂಟೈನ್ಸ್ ವಾರದ ಕೊನೆಯ, ಬಹುಮುಖ್ಯ ದಿನ ವ್ಯಾಲೆಂಟೈನ್ಸ್ ಡೇ. ಫೆ. 14ರಂದು ಆಚರಿಸುವ ಈ ದಿನ ಪ್ರೀತಿಗೆ ಹೊಸ ಬಾಷ್ಯ ಬರೆಯುವ ದಿನ ಎಂದೇ ಹೇಳಬಹುದು. ಇದನ್ನು 3 ನೇ ಶತಮಾನದ ರೋಮನ್ ಸಂತ ವ್ಯಾಲೆಂಟೈನ್ ನೆನಪಿಗಾಗಿ ಆಚರಿಸಲಾಗುತ್ತದೆ. ಪ್ರೀತಿ ಮತ್ತು ಬದ್ಧತೆಯೊಂದಿಗೆ ಒಬ್ಬ ಪರಿಪೂರ್ಣ ಸಂಗಾತಿಯನ್ನು ಆಯ್ದುಕೊಳ್ಳುವ ವಿಶೇಷ ದಿನ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಮುಂದಿನ ಸುದ್ದಿ
Show comments