ಬೆಂಗಳೂರು : ಹೆಚ್ಚಾಗಿ ಮನೆಯ ಅಡುಗೆ ಕೋಣೆಯಲ್ಲಿ ಜೀರಳೆಗಳ ಹಾವಳಿ ಹೆಚ್ಚಾಗಿರುತ್ತದೆ. ರಾತ್ರಿಯ ವೇಳೆ ಮೇಲೆ ಇವು ಓಡಾಡುತ್ತವೆ. ಇವುಗಳಿಂದ ಹಲವು ಕಾಯಿಲೆಗಳು ಹರಡುವುದರಿಂದ ಅವುಗಳನ್ನು ಮನೆಯಿಂದ ಓಡಿಸುವುದು ಉತ್ತಮ. ಅದಕ್ಕಾಗಿ ಕೆಮಿಕಲ್ ಯುಕ್ತ ಔಷಧಿಗಳನ್ನು ಬಳಸುವ ಬದಲು ಮನೆಯಲ್ಲೇ ಇರುವ ಕೆಲ ಪದಾರ್ಥಗಳನ್ನು ಬಳಸಿ ಜೀರಳೆಗಳನ್ನು ಓಡಿಸಬಹುದು.
* ಸೌತೆಕಾಯಿಯನ್ನು ಸಿಪ್ಪೆ ಸಮೇತ ದುಂಡಗೆ ಕತ್ತರಿಸಿ ಅಡುಗೆ ಮನೆಯ ಮೂಲೆಗಳಲ್ಲಿ ಇಡಿ. ಇದನ್ನು ವಾರಕ್ಕೊಮ್ಮೆ ಬದಲಾಯಿಸುತ್ತಿದ್ದರೆ ಜಿರಳೆಗಳ ಕಾಟ ತಪ್ಪುತ್ತದೆ.
* ಕಾಫಿ ಪೌಡರ್ ರನ್ನು ಅಡುಗೆ ಮನೆ ಸಂಧಿಗಳಲ್ಲಿ, ಮೂಲೆಗಳಲ್ಲಿ ಸಿಂಪಡಿಸಿ. ಬೆಳಗ್ಗೆ ಅಡುಗೆ ಮನೆ ಸ್ವಚ್ಛಮಾಡಿ. ಹೀಗೆ ಮೂರು ನಾಲ್ಕು ದಿನ ಮಾಡಿದರೆ ಜಿರಳೆಗಳು ಬರುವುದಿಲ್ಲ.
* ಬಿರಿಯಾನಿ ಎಲೆಗಳನ್ನು ಚೆನ್ನಾಗಿ ಪುಡಿ ಮಾಡಿ ಜಿರಳೆ ಹೆಚ್ಚಿರುವ ಜಾಗದಲ್ಲಿ ಹಾಗೂ ಅಡುಗೆ ಮನೆಯ ಎಲ್ಲಾ ಕಡೆ ಹಾಕುವುದರಿಂದ ಇದರ ವಾಸನೆಗೆ ಜಿರಳೆಗಳು ಬರುವುದಿಲ್ಲ.
* ಬೆಳ್ಳುಳ್ಳಿ ಅಥವಾ ಈರುಳ್ಳಿ ರಸವನ್ನು ಒಂದು ಲೋಟ ನೀರಿಗೆ ಹಾಕಿ ಮಿಕ್ಸ್ ಮಾಡಿ ಸ್ಪ್ರೇ ಬಾಟಲಿಗೆ ಹಾಕಿ ಅಡುಗೆ ಮನೆಯ ಎಲ್ಲಾ ಕಡೆ ಸ್ಪ್ರೇ ಮಾಡಿದರೆ ಜಿರಳೆಗಳು ಮನೆಯಿಂದ ಆಚೆ ಹೋಗುತ್ತವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.