Webdunia - Bharat's app for daily news and videos

Install App

ಎಲ್ಲೆಂದರಲ್ಲಿ ಬೆಳೆಯುವ ತುಂಬೆಗಿಡದಲ್ಲೂ ಇದೆಯಂತೆ ಹಲವು ರೋಗಗಳನ್ನ ಗುಣಪಡಿಸುವ ಗುಣ

Webdunia
ಭಾನುವಾರ, 27 ಮೇ 2018 (06:32 IST)
ಬೆಂಗಳೂರು : ತುಂಬೆಗಿಡವನ್ನ ನಾವು ನೀವೆಲ್ಲರೂ ಹಲವು ಕಡೆಗಳಲ್ಲಿ ಕಂಡಿರುತ್ತೇವೆ, ಇದಕ್ಕೆ ಬೆಳೆಯಲು ಪ್ರತೇಕವಾದ ಜಾಗ ಬೇಕಾಗಿಲ್ಲ, ಎಲ್ಲೆಂದರಲ್ಲಿ ಹದವಾಗಿ, ಸೋಮಪಾಗಿ ಬೆಳೆಯುತ್ತದೆ. ಇದು ನೋಡಲು ಅಂದವಾಗಿರುವುದಲ್ಲದೆ ಇದರಲ್ಲಿ ಬಿಡುವ ಹೂವುಗಳು ವಿವಿಧ ಬಗೆಯವುಗಳಾಗಿವೆ. ಇದು ಹಲವು ರೋಗಗಳನ್ನ ಗುಣಪಡಿಸುವ ಗುಣವನ್ನ ಹೊಂದಿದೆ.


* ಬಿಳಿ ತುಂಬೆ ಹೂವಗಳನ್ನ ಸ್ವಲ್ಪ ಪ್ರಮಾಣದ ಜೇನು ತುಪ್ಪದಲ್ಲಿ ನೆನೆಸಿ ತಿಂದರೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.

* ತುಂಬೆಗಿಡದ ರಸದ ಜೊತೆ ಕರಿಮೆಣಸಿನ ಪುಡಿಯನ್ನು ಬೆರೆಸಿ ನಿಯಮಿತವಾಗಿ ಸೇವಿಸಿದರೆ ವಿಷಮಜ್ವರವು ಕಡಿಮೆಯಾಗುತ್ತದೆ.

* ತಲೆನೋವು, ತಲೆ ಭಾರ ಮತ್ತು ಮೂಗು ಕಟ್ಟಿದಲ್ಲಿ, ತುಂಬೆಗಿಡದ ಖಾಂಡವನ್ನು ನೀರಿನಲ್ಲಿ ಕುದಿಸಿ ಅದರ ಹಬೆಯನ್ನು ತೆಗೆದುಕೊಂಡರೆ, ತಲೆನೋವು, ತಲೆ ಭಾರ ಕಡಿಮೆಯಾಗುತ್ತದೆ.

* ನಿಯಮಿತ ಪ್ರಮಾಣದಲ್ಲಿ ತುಂಬೆಗಿಡದ ರಸಕ್ಕೆ ಅಕ್ಕಿತೊಳೆದ ನೀರನ್ನು ಬೆರೆಸಿ ಸೇವಿಸಿದರೆ ಮತ್ತು ಅದೇ ಮಿಶ್ರಣದಿಂದ ಕಣ್ಣನ್ನು ತೊಳೆಯುತ್ತಿದ್ದರೆ ಕಣ್ಣಿನ ಸಮಸ್ಯೆ ದೂರವಾಗುತ್ತದೆ.

* ದೇಹದಲ್ಲಿ ಯಾವುದೇ ತರಹದ ಊತವಿದ್ದಲ್ಲಿ ತುಂಬೆ ಸೊಪ್ಪಿನ ಕಷಾಯದಿಂದ ಶಾಕವನ್ನು ಕೊಟ್ಟರೆ ಊತ ಕಡಿಮೆಯಾಗುತ್ತದೆ.

* ತುಂಬೆಗಿಡದ ಕಷಾಯಕ್ಕೆ ಸೈಂಧವ ಉಪ್ಪನ್ನು ಸೇರಿಸಿ, ದಿನಕ್ಕೆ 2 ಬಾರಿ ಸೇವಿಸಿದರೆ, ಜೀರ್ಣಶಕ್ತಿ ಹೆಚ್ಚುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments