ಬೆಂಗಳೂರು: ಸ್ಕಿನ್ ಅಲರ್ಜಿ ಸಮಸ್ಯೆ ಹೆಚ್ಚಿನವರಿಗೆ ಇರುತ್ತದೆ. ಇದು ಧೂಳಿನಿಂದ, ಸೇವಿಸುವ ಆಹಾರದಿಂದ ಇನ್ನೂ ಹಲವು ಕಾರಣಗಳಿಂದ ಬರುತ್ತದೆ. ಕೆಲವು ಮನೆಮದ್ದಿನಿಂದ ಸ್ಕಿನ್ ಅಲರ್ಜಿಗಳನ್ನು ಕಡಿಮೆಮಾಡಬಹುದು.
ಅಡುಗೆ ಸೋಡಾ 1 ಚಮಚ ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿಕೊಂಡು ಅಲರ್ಜಿಯಾಗಿರುವ ಜಾಗದಲ್ಲಿ ಹಚ್ಚಿ 10-15 ನಿಮಿಷ ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ. ದಿನಕ್ಕೆ 2 ಬಾರಿ ಹೀಗೆ ಮಾಡಿ. ಹಾಗೆ 1 ಚಮಚ ನಿಂಬೆರಸವನ್ನು ತೆಗೆದುಕೊಂಡು ಹತ್ತಿಯಿಂದ ಅದನ್ನು ಅಲರ್ಜಿಯಾದಲ್ಲಿ ಹಚ್ಚಿ ಇದನ್ನು ಕೂಡ 10-15 ನಿಮಿಷ ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ.ಇದರಿಂದ ಸ್ಕಿನ್ ಅಲರ್ಜಿ ಕಡಿಮೆಯಾಗುತ್ತದೆ. ಆಲೋವೆರಾ ಜೆಲ್ ಅಲರ್ಜಿಗೆ ಹಚ್ಚಿದರೂ ಕೂಡ ಅದು ಕಡಿಮೆಯಾಗುತ್ತದೆ. ತುಳಸಿ ಎಲೆ ಪೇಸ್ಟ್ ಮಾಡಿ ತುರಿಕೆಯಾದಲ್ಲಿ ಹಚ್ಚಿ ಒಣಗಿದ ಮೇಲೆ ತೊಳೆಯಿರಿ. ಆಲೀವ್ ಎಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ತುರಿಕೆ ಭಾಗಕ್ಕೆ ಹಚ್ಚಿ ಮಸಾಜ್ ಮಾಡಿದರೆ ತುರಿಕೆ ಕಡಿಮೆಯಾಗುತ್ತದೆ.
ಅಲರ್ಜಿ ಆದಾಗ ಕಿವಿ ಹಣ್ಣು, ಮುಸುಂಬಿ, ಕಿತ್ತಳೆ ಹಣ್ಣನ್ನು ತಿನ್ನಬೇಕು. ಏಕೆಂದರೆ ಈ ಹಣ್ಣುಗಳು ಅಲರ್ಜಿ ತುರಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಹಾಗೆ ಸೌತೆಕಾಯಿ ಜ್ಯೂಸ್ ಮಾಡಿ ಕುಡಿಯುವುದರಿಂದ ಸ್ಕಿನ್ ಅಲರ್ಜಿ ಕಡಿಮೆಯಾಗುತ್ತದೆ.
ಓಂಕಾಳು ½ ಚಮಚ ಹಾಗು 1ಚಮಚ ಬೆಲ್ಲ ಹಾಕಿ ಮಿಕ್ಸ್ ಮಾಡಿ ತಿನ್ನಬೇಕು. ಇದನ್ನು ದಿನಕ್ಕೆ 2 ಬಾರಿ ತೆಗೆದುಕೊಳ್ಳುವುದರಿಂದ ಸ್ಕಿನ್ ಅಲರ್ಜಿ 90% ಕಡಿಮೆಯಾಗುತ್ತೆ. 2 ಚಮಚ ಚಕ್ಕೆ ಪುಡಿಗೆ 2 ಚಮಚ ಜೇನುತುಪ್ಪ ಮಿಕ್ಸ್ ಮಾಡಿ ಪೇಸ್ಟ್ ಮಾಡಿ ಅಲರ್ಜಿಯಾದಲ್ಲಿಗೆ ಹಚ್ಚಿ ಒಣಗಿದ ಮೇಲೆ ತೊಳೆಯಿರಿ.ಇದನ್ನು ದಿನಕ್ಕೆ 2 ಬಾರಿ ಮಾಡಿ.
ಕ್ಯಾರೆಟ್ ಪೇಸ್ಟ್ 1 ಚಮಚ, ಕಹಿಬೇವು 1 ಚಮಚ, ಅರಶಿನ 1 ಚಮಚ, ಗೋದಿಹಿಟ್ಟು 1 ಚಮಚ, ಕಲ್ಲುಪ್ಪು 1 ಚಿಟಿಕೆ ಹಾಗು ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿ ಅದನ್ನು ಅಲರ್ಜಿಯಾದಲ್ಲಿ ಹಚ್ಚಿ ಹತ್ತಿಬಟ್ಟೆಯನ್ನು ಅದರ ಮೇಲೆ ಕಟ್ಟಿ 4-5 ಗಂಟೆ ಹಾಗೆ ಬಿಟ್ಟು ಆಮೇಲೆ ತಣ್ಣೀರಿನಿಂದ ತೊಳೆಯಿರಿ. ಇದು ಉತ್ತಮ ಫಲಿತಾಂಶ ನೀಡುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ