ಬೆಂಗಳೂರು: ನಮಗೆಲ್ಲರಿಗೂ ಒಂದು ಸಾಮಾನ್ಯ ಅಭ್ಯಾಸವಿದೆ. ಪೂರಿ ಅಥವಾ ಬಜ್ಜಿ ಮಾಡಿ ಉಳಿದ ಎಣ್ಣೆಯನ್ನು ಹಾಗೇ ಉಳಿತಾಯ ಮಾಡಿ ಮತ್ತೊಮ್ಮೆ ಬಳಕೆ ಮಾಡಲು ಇಟ್ಟುಕೊಳ್ಳುವುದು.
ಹೀಗೆ ಒಮ್ಮೆ ಬಳಸಿದ ಎಣ್ಣೆಯನ್ನು ಮರುಬಳಕೆ ಮಾಡುವುದು ಎಷ್ಟು ಸುರಕ್ಷಿತ? ಖಂಡಿತಾ ಆ ರೀತಿ ಮಾಡಬಾರದು. ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ತಜ್ಞರು ಹೇಳುತ್ತಾರೆ.
ಮರು ಬಳಕೆ ಮಾಡಿದ ಎಣ್ಣೆಯನ್ನು ಟ್ರಾನ್ಸ್ ಫ್ಯಾಟಿ ಆಸಿಡ್ ಅಂಶ ಹೆಚ್ಚಾಗುತ್ತದೆ. ಇದು ಆರೋಗ್ಯಕ್ಕೆ ತೀರಾ ಡೇಂಜರ್ ಎನ್ನುತ್ತಾರೆ ತಜ್ಞರು. ಸಾಸಿವೆ ಎಣ್ಣೆಯಂತಹ ಬೇಳೆ ಕಾಳುಗಳ ಎಣ್ಣೆಗಳನ್ನು ಎರಡು ಬಾರಿ ಬಳಕೆ ಮಾಡಬಹುದು. ಹಾಗಿದ್ದರೂ ಅದು ಕೂಡಾ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು.
ಅಲ್ಲದೆ ಎಣ್ಣೆ ಮರು ಬಳಕೆ ಮಾಡುವುದರಿಂದ ದೇಹದಲ್ಲಿ ಬೇಡದ ಕೊಬ್ಬು ಶೇಖರಣೆಯಾಗುವ ಸಂಭವ ಹೆಚ್ಚು. ಸಹಜವಾಗಿಯೇ ಇದು ಹೃದಯದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹಾಗಾಗಿ ಸುಮ್ಮನೇ ವೇಸ್ಟ್ ಆಗುತ್ತದಲ್ಲಾ ಎಂದು ಎಣ್ಣೆ ಮರುಬಳಕೆ ಮಾಡುವ ಮೊದಲು ಯೋಚಿಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ