ಬೆಂಗಳೂರು: ಮದುವೆಯಾದ ಹೊಸತರಲ್ಲಿ ಇಹಲೋಕದ ಪರಿವಿಯೇ ಇಲ್ಲದೇ ಪ್ರೇಮಲೋಕದಲ್ಲಿ ಜಾರುವುದು ಸಾಮಾನ್ಯ. ಆದರೆ ಇದು ಅತಿಯಾದರೆ ಒಳ್ಳೆಯದಲ್ಲ.
ಕೆಲವರಿಗೆ ಪಬ್ಲಿಕ್ ಆಗಿ ರೊಮ್ಯಾನ್ಸ್ ಮಾಡೋದು ಇಷ್ಟವಿರಲ್ಲ. ಇನ್ನು ಕೆಲವರು ಹಿರಿಯರು, ಕಿರಿಯರು, ಅಥವಾ ಮನೆಯ ಇತರ ಸದಸ್ಯರು ಎದುರಿಗಿದ್ದಾರೆ ಎಂಬುದನ್ನೇ ಮರೆತು ಚೆಲ್ಲು ಚೆಲ್ಲಾಗಿ ಆಡುತ್ತಾರೆ.
ಇದರಿಂದ ತನ್ನ ಸಂಗಾತಿಗೆ ಅಥವಾ ಎದುರು ಕೂತವರಿಗೆ ಮುಜುಗರವಾಗಬಹುದು ಎಂಬ ಪರಿವೆಯೂ ಇರಲ್ಲ. ಇಂತಹ ಸಂದರ್ಭದಲ್ಲಿ ಸಂಗಾತಿ ಜತೆಗೆ ಕೂತು ಮಾತನಾಡುವುದು ಒಳ್ಳೆಯದು. ನಿಮ್ಮದೇ ಪ್ರೈವೇಟ್ ಟೈಮ್ ಗೆ ವೇಳಾಪಟ್ಟಿ ಹಾಕಿಕೊಳ್ಳಿ. ಆ ಸಮಯವನ್ನು ನಿಮ್ಮದೇ ಲೋಕದಲ್ಲಿ ಏಕಾಂತವಾಗಿ ಕಳೆಯಿರಿ. ಕೆಲವು ಸಮಯ ಹೊರಗಡೆ ಸುತ್ತಾಡಿ. ಆದಷ್ಟು ಸಂಗಾತಿಗೆ ಸಮಯ ಕೊಡಿ. ಇದರಿಂದ ಹಿರಿಯರ ಎದುರುಗಡೆ ಮುಜುಗರವೂ ತಪ್ಪುತ್ತದೆ.