Publish Date: Fri, 05 Feb 2021 (07:31 IST)
Updated Date: Fri, 05 Feb 2021 (07:32 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕೆಟ್ಟ ಆಹಾರ ಪದ್ಧತಿಯಿಂದ ಹೆಚ್ಚಿನವರು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತೂಕ ಇಳಿಸಲು ಹರಸಾಹಸ ಮಾಡುತ್ತಾರೆ. ಹಾಗಾಗಿ ನಿಮ್ಮ ತೂಕ ಇಳಿಸಿಕೊಳ‍್ಳಲು ವ್ಯಾಯಾಮಗಳ ಜೊತೆಗೆ ತೂಕ ಇಳಿಸಲು ಸಹಕಾರಿಯಾಗುವ ಆಹಾರಗಳನ್ನು ಸೇವಿಸಿ.
ಬದನೆಕಾಯಿ ತೂಕ ಇಳಿಕೆ ಮಾಡಲು ಸಹಕಾರಿಯಾಗಿದೆ. ಇದು ಕಡಿಮೆ ಕೊಬ್ಬಿನಾಂಶವನ್ನು ಹೊಂದಿರುತ್ತದೆ. ಇದು ಫೈಬರ್ ಭರಿತವಾಗಿದ್ದು, ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ತುಂಬಾ ಕಡಿಮೆ ಪ್ರಮಾಣದ ಕ್ಯಾಲೋರಿಗಳನ್ನು ಹೊಂದಿದೆ. ಹಾಗಾಗಿ ತೂಕ ಇಳಿಸಲು ಯತ್ನಿಸುವರು ಬದನೆಕಾಯಿಯನ್ನು ಹೆಚ್ಚಾಗಿ ನಿಮ್ಮ ಆಹಾರದಲ್ಲಿ ಬಳಸಿ.