ಬೆಂಗಳೂರು : ಕೆಲವರಿಗೆ ಮುಖದ ಮೇಲೆ ಅತಿಯಾಗಿ ಕೂದಲು ಬೆಳೆದಿರುತ್ತದೆ. ಇದು ನಿಮ್ಮ ಅಂದವ್ನು ಕೆಡಿಸುತ್ತದೆ. ಆದ್ದರಿಂದ ಹಲವರು ಈ ಕೂದಲನ್ನು ನಿವಾರಣೆ ಮಾಡಲು ವ್ಯಾಕ್ಸ್ ಅಥವಾ ದಾರದ ಮೂಲಕ ತೆಗೆಯುತ್ತಾರೆ. ಇದರಿಂದ ತುಂಬಾ ನೋವಾಗುತ್ತದೆ. ಆದಕಾರಣ ನೋವಾಗದೆ ಮುಖದ ಕೂದಲನ್ನು ತೆಗೆಯಲು ಹೀಗೆ ಮಾಡಿ.
ಒಂದು ಈರುಳ್ಳಿಯನ್ನು ಅರ್ಧಕ್ಕೆ ಕತ್ತರಿಸಿಕೊಳ್ಳಿ. ನಂತರ ಕತ್ತರಿಸಿದ ಅರ್ಧ ಈರುಳ್ಳಿಯ ಹೊರ ಪದರವನ್ನು ತೆಗೆದುಕೊಂಡು 10 ತುಳಸಿ ಎಲೆಗಳನ್ನು ಬೆರಸಿ ಚೆನ್ನಾಗಿ ರುಬ್ಬಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ 15 ನಿಮಷಗಳ ನಂತರ ತೊಳೆದುಕೊಳ್ಳಿ.
ವಾರಕ್ಕೆ 2-3 ಬಾರಿ ನೀವು ಇದನ್ನು ಪ್ರಯೋಗಿಸಿದರೆ 1 ತಿಂಗಳಲ್ಲಿ ನಿಮ್ಮ ಮುಖದ ಮೇಲಿನ ಕೂದಲಿನ ಬೆಳವಣಿಗೆ ಕಡಿಮೆಯಾಗಿರುತ್ತದೆ.