Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಡಯಟ್ ವೇಳೆ ಇವುಗಳನ್ನು ಹೆಚ್ಚಾಗಿ ತಿಂದರೆ ಆರೋಗ್ಯ ಕೆಡುವುದು ಖಂಡಿತ

ಡಯಟ್ ವೇಳೆ ಇವುಗಳನ್ನು ಹೆಚ್ಚಾಗಿ ತಿಂದರೆ ಆರೋಗ್ಯ ಕೆಡುವುದು ಖಂಡಿತ
ಬೆಂಗಳೂರು , ಶುಕ್ರವಾರ, 11 ಅಕ್ಟೋಬರ್ 2019 (09:11 IST)
ಬೆಂಗಳೂರು : ಯುವಕ ಯುವತಿಯರು ತಮ್ಮ ದೇಹ ಸೌಂದರ್ಯವನ್ನು ಕಾಪಾಡಲು ಡಯಟ್ ಮೋರೆ ಹೋಗುತ್ತಾರೆ. ಆದರೆ ಇದರಿಂದ ಅವರ  ಜೀವಕ್ಕೆ ಆಪತ್ತು ಎದುರಾಗುವ ಸಂಭವವಿರುತ್ತದೆ.




ಹೌದು. ಡಯಟ್​ ಸಿಗರೇಟ್​ ಸೇದುವುದಕ್ಕಿಂತಲೂ ಅಪಾಯಕಾರಿ ಎನ್ನುತ್ತದೆ ಒಂದು ಅಧ್ಯಯನ. ದಿ ಲೆನ್ಸೆಟ್​ ಎಂಬ ಅಂತಾರಾಷ್ಟ್ರೀಯ ವೈದ್ಯಕೀಯ ನಿಯತಕಾಲಿಯೊಂದರಲ್ಲಿ ಪ್ರಕಟವಾಗಿರುವ ಸಮೀಕ್ಷೆಯಲ್ಲಿ 195 ದೇಶಗಳ 25 ವರ್ಷದೊಳಗಿನ ಯುವಕ-ಯುವತಿಯರನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು.ನಾವು ಏನು ತಿನ್ನಬೇಕು ಅಥವಾ ನಮ್ಮ ದೇಹಕ್ಕೆ ಏನು ಬೇಕೆಂಬುದೇ ತಿಳಿಯದ ಜನರು ಸರಿಯಾದ ಡಯಟ್​ ಅನುಕರಣ ಮಾಡದಿರುವುದರಿಂದ 2017ರಲ್ಲಿ 25 ವರ್ಷದೊಳಗಿನ 10.9 ಮಿಲಿಯನ್ ಜನರು ಸಾವನ್ನಪ್ಪುತ್ತಾರೆ ಎನ್ನುತ್ತದೆ ಅಧ್ಯಯನ.


ರೆಡ್​ ಮೀಟ್, ಸಕ್ಕರೆ ಅಂಶ ಹೆಚ್ಚಿರುವ ತಿಂಡಿಗಳು, ಆ್ಯಸಿಡ್​ ಅಂಶ ಹೆಚ್ಚಾಗಿರುವ ಪದಾರ್ಥಗಳ ಬಳಕೆ ಆದಷ್ಟೂ ಮಿತವಿದ್ದಷ್ಟೂ ಒಳ್ಳೆಯದು. ಅತಿಯಾದ ಸೋಡಿಯಂ ಅಂಶ ಇರುವ ಪದಾರ್ಥಗಳ ಬಳಕೆ, ಹಣ್ಣುಗಳನ್ನು ಹೆಚ್ಚು ಸೇವಿಸದಿರುವುದು, ಧಾನ್ಯಗಳ ಕಡಿಮೆ ಬಳಕೆಯಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹಸ್ತಮೈಥುನದಿಂದ ಶಿಶ್ನ ಉದ್ದ ಆಗುತ್ತಾ?