ಬೆಂಗಳೂರು : ಮಹಿಳೆಯರು ಪ್ರತಿದಿನ ಸೇಬು ತಿಂದರೆ ಅವರಲ್ಲಿ ಲೈಂಗಿಕ ಆಸಕ್ತಿ ಹೆಚ್ಚುತ್ತದೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.
ಸೇಬಿನಲ್ಲಿರುವ ‘ಪಾಲಿಹಿನೋಲ್ಸ್’ ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳು ಜನನಾಂಗಗಳಿಗೆ ಹೆಚ್ಚಿನ ರಕ್ತ ಪೂರೈಸುವ ಕಾರಣ ಮಹಿಳೆಯರಲ್ಲಿ ಲೈಂಗಿಕ ಕ್ರಿಯೆಗೆ ಪ್ರಚೋದನೆ ಸಿಗುತ್ತದೆ. ಹೀಗಾಗಿ ಪ್ರತಿನಿತ್ಯ ಒಂದೆರಡು ಸೇಬು ತಿನ್ನುವ ಮಹಿಳೆಯರಲ್ಲಿ ಲೈಂಗಿಕ ತೃಪ್ತಿಯ ಮಟ್ಟ ಇತರರಿಗಿಂತ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಎಂಬ ಅಂಶವನ್ನು ವರದಿಯಲ್ಲಿ ಹೇಳಲಾಗಿದೆ.
ಸ್ತ್ರೀಯರಲ್ಲಿ ಲೈಂಗಿಕ ಕ್ರಿಯೆಗೆ ಪ್ರಚೋದನೆ ನೀಡುವ ‘ಈಸ್ಟ್ರೋಡಿಯಲ್’ ಎಂಬ ಹಾರ್ಮೋನ್ ನ ಅಂಶ ಸೇಬಿನಲ್ಲಿ ಹೆಚ್ಚು ಇರುವುದೇ ಇದಕ್ಕೆ ಕಾರಣ ಎಂದು ಸ್ತ್ರೀರೋಗ ಮತ್ತು ಪ್ರಸೂತಿ ಸಂಬಂಧಿ ಜರ್ನಲ್‌ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.